Mysore
24
scattered clouds

Social Media

ಮಂಗಳವಾರ, 18 ಮಾರ್ಚ್ 2025
Light
Dark

IND vs ENg 1st test: ಟೀಂ ಇಂಡಿಯಾಗೆ 230ರನ್‌ ಟಾರ್ಗೆಟ್‌ ನೀಡಿದ ಇಂಗ್ಲೆಂಡ್‌!

ಹೈದರಾಬಾದ್‌: ಇಲ್ಲಿನ ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾಗೆ 230ರನ್‌ ಗುರಿ ನೀಡಿದೆ ಇಂಗ್ಲೆಂಡ್‌.

ಮೊದಲ ಟೆಸ್ಟ್‌ನ ನಾಲ್ಕನೇ ದಿನವಾದ ಇಂದು 316ರನ್‌ ಗಳಿಂದ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡ 106 ರನ್‌ ಬಾರಿಸಿ ಉಳಿದ ನಾಲ್ಕು ವಿಕೆಟ್‌ ಕಳೆದುಕೊಂಡು ಟೀಂ ಇಂಡಿಯಾಗೆ 230 ರನ್‌ಗಳ ಗುರಿ ನೀಡಿದೆ.

ಒಲಿ ಪೋಪ್‌ ತಾವೆದುರಿಸಿದ 278 ಎಸೆತಗಳಲ್ಲಿ 21 ಬೌಂಡರಿ ಸಹಿತ 196 ರನ್‌ ಬಾರಿಸಿ ಕೇವಲ 4 ರನ್‌ಳಿಂದ ದ್ವಿಶತಕ ವಂಚಿತರಾದರು. ರೆಹನ್‌ ಅಹ್ಮದ್‌ (28), ಟಾಮ್‌ ಹಾರ್ಟ್ಲಿ (34)ರನ್‌ ಗಳಿಸಿದರು. ಅಂತಿಮವಾಗಿ ೧೦೨ ಓವರ್‌ಗಳಲ್ಲಿ 420 ರನ್‌ಗಳಿಗೆ ಸರ್ವಪತನವಾಯಿತು.

ಟೀಂ ಇಂಡಿಯಾ ಪರ ಜಸ್‌ಪ್ರಿತ್‌ ಬುಮ್ರಾ 41/4, ಅಶ್ವಿನ್‌ 126/3, ಮತ್ತು ಜಡೇಜಾ 131/2 ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ