ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊಲದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ ಜೋಡಿಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರು ಟೀಂ ಇಂಡಿಯಾ ಪರವಾಗಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಡ್ಡು-ಅಶ್ವಿನ್ ಜೋಡಿ 500+ ವಿಕೆಟ್ಗಳನನ್ನು ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್ ಪಡೆ ಟೀಂ ಇಂಡಿಯಾ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೊಲದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಬೆನ್ ಡಕೆಟ್ (35) ರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ ಟೀಂ ಇಂಡಿಯಾ ಪರವಾಗಿ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದರ ಬೆನ್ನಲ್ಲೇ ರವೀಂದ್ರ ಜಡೇಜಾ ಒಲಿ ಪೋಪ್ (1) ವಿಕೆಟ್ ಕಬಳಿಸಿದರು. ಈ ಎರಡು ವಿಕೆಟ್ಗಳನ್ನು ಪಡೆದು ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಜೋಡಿ ಎಂಬ ದಾಖಲೆ ಅಶ್ವಿನ್-ಜಡೇಜಾ ಪಾಲಾಯಿತು.
ಇದಕ್ಕು ಮೊದಲು ಟೀಂ ಇಂಡಿಯಾ ಪರವವಾಗಿ ಈ ದಾಖಲೆಯನ್ನು ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ತಮ್ಮ ಹೆಸರಿಗೆ ಬರೆದುಕೊಂಡದ್ದರು. 54 ಟೆಸ್ಟ್ ಪಂದ್ಯಗಳನ್ನಾಡಿದ್ದ ಕುಂಬ್ಳೆ-ಭಜ್ಜಿ ಜೋಡಿ ಒಟ್ಟು 501 ವಿಕೆಟ್ ಕಬಳಿಸಿ ಬರೆದಿದ್ದ ದಾಖಲೆಯನ್ನು, ಇದೀಗ ಜಡ್ಡು-ಅಶ್ವಿನ್ ಜೋಡಿ ಅಳಿಸಿಹಾಕಿದ್ದಾರೆ.
ಟೀಂ ಇಂಡಿಯಾ ಪರವಾಗಿ 50 ಟೆಸ್ಟ್ ಪಂದ್ಯಗಳಲ್ಲಿ ಜೊತೆಯಾಗಿ ಬೌಲಿಂಗ್ ಮಾಡಿರುವ ಅಶ್ವಿನ್-ಜಡೇಜಾ ಜೋಡಿಯು ಇದೀಗ 502 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರವಾಗಿ ಅತೀಹೆಚ್ಚು ವಿಕೆಟ್ ಕಿತ್ತ ಯಶಸ್ವಿ ಬೌಲಿಂಗ್ ಜೋಡಿ ಎಂಬ ದಾಖಲೆ ಬರೆದಿದ್ದಾರೆ.
ಟೆಸ್ಟ್ ಕ್ರಿಕೆಟ್ನ ಅತ್ಯಂತ ಯಶಸ್ವಿ ಜೋಡಿ ಎಂಬ ವಿಶ್ವ ದಾಖಲೆ ಇರುವುದು ಇಂಗ್ಲೆಂಡ್ ವೇಗಿಗಳಾದ ಜೇಮ್ಸ್ ಅ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಹೆಸರಿನಲ್ಲಿ. ಜೊತೆಯಾಗಿ 138 ಟೆಸ್ಟ್ ಪಂದ್ಯಗಳನ್ನಾಡಿರುವ ಈ ಜೋಡಿ ಒಟ್ಟು 1039 ವಿಕೆಟ್ಗಳನ್ನು ಕಬಳಿಸಿ ವರ್ಲ್ಡ್ ರೆಕಾರ್ಡ್‌ನ್ನು ತನ್ನದಾಗಿಸಿಕೊಂಡಿದೆ.