Mysore
30
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

IND V/S ENG: ಅಭಿಷೇಕ್‌ ಬಿರುಸಿನ ಶತಕ; ಭಾರತಕ್ಕೆ 150 ರನ್‌ಗಳ ಭರ್ಜರಿ ಜಯ

ಮುಂಬೈ: ನಗರದ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ದ ನಡೆದ T20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ 150 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 5 ಪಂದ್ಯಗಳ T20 ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿದೆ.

ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಭಾರತ ತಂಡದ ಪರವಾಗಿ ಆರಂಭಿಕರಾಗಿ ಸಂಜು 16(7), ಜೊತೆ ಕ್ರೀಸ್‌ಗಿಳಿದ ಅಭಿಷೇಕ್‌ ಶರ್ಮಾ ಅವರು ಅಕ್ಷರಶಃ ಅಬ್ಬರಿಸಿ 135(54) ಶತಕ ಸಿಡಿಸಿದರು. ಆ ಮೂಲಕ T20 ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ಭಾರತ ತಂಡದ ಎರಡನೇ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು.

ಅಭಿಷೇಕ್‌ ಅವರ ಶತಕದ ಬಲದಿಂದ ಭಾರತ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 247 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು.

248 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ ತಂಡ 10.3 ಓವರ್‌ಗಳಲ್ಲಿ 97 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಹೀನಾಯ ಸೋಲು ಕಂಡಿತು. ಇಂಗ್ಲೆಂಡ್‌ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ಫಿಲ್‌ ಸಾಲ್ಟ್‌ 53(23) ಬಿರುಸಿನ ಅರ್ಧಶಕತ ಬಾರಿಸಿದರೆ, ಉಳಿದವರೆಲ್ಲ ಅಲ್ಪ ಮೊತ್ತಕ್ಕೆ ನೆಲ ಕಚ್ಚಿದರು.

ಇಂಗ್ಲೆಂಡ್‌ ತಂಡದ ವಿರುದ್ಧ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದ ಭಾರತದ ಬೌಲರ್‌ಗಳಾದ ಮೊಹಮ್ಮದ್‌ ಶಮಿ (25/3), ಶಿವಂ ದುಬೆ (11/2), ವರುಣ್‌ ಚಕ್ರವರ್ತಿ (25/2) ಮತ್ತು ಅಭಿಷೇಕ್‌ ಶರ್ಮಾ (3/2) ವಿಕೆಟ್‌ ಪಡೆದು ಮಿಂಚಿದರು.

ಈ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅಭಿಷೇಕ್‌  ಶರ್ಮಾ ಪಡೆದರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ವರಣ್‌ ಚಕ್ರವರ್ತಿ ತಮ್ಮದಾಗಿಸಿಕೊಂಡರು.

Tags: