Mysore
20
overcast clouds

Social Media

ಬುಧವಾರ, 13 ನವೆಂಬರ್ 2024
Light
Dark

ಭಾರತೀಯರಿಗೆ ಭಾರೀ ನಿರಾಸೆ; 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ಕ್ರಿಕೆಟ್‌, ಹಾಕಿ ಔಟ್!‌

ಲಂಡನ್:‌ 2026ಕ್ಕೆ ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆಯಲಿರುವ 23ನೇ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಿಂದ ಕ್ರಿಕೆಟ್‌ ಸೇರಿದಂತೆ 10 ಕ್ರೀಡೆಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.

2026ರ ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನು ಬಜೆಟ್‌ ಸ್ನೇಹಿಗೊಳಿಸುವ ಉದ್ದೇಶದಿಂದ ಕ್ರಿಕೆಟ್‌, ಹಾಕಿ, ಬ್ಯಾಡ್ಮಿಂಟನ್, ಕುಸ್ತಿ ಹಾಗೂ ಶೂಟಿಂಗ್‌ ಸೇರಿದಂತೆ 10 ಕ್ರೀಡೆಗಳನ್ನು ಕೈಬಿಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ನಿರ್ಧಾರ ಭಾರತದ ಮೇಲೆ ಪ್ರಭಾವ ಬೀರಲಿದ್ದು, ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಪದಕ ಗೆಲ್ಲುವ ಸಾಧ್ಯತೆ ಇದೆ. ಏಕೆಂದರೆ ಈ ಬಾರಿ ಹೊರಗಿಡಲಾಗಿರುವ ಹತ್ತು ಕ್ರೀಡೆಗಳಲ್ಲಿ ಭಾರತ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿತ್ತು. ಹೀಗೆ ಭಾರತ ಬಲಿಷ್ಠವಾಗಿರುವ ಕ್ರೀಡೆಗಳನ್ನು ಕ್ರೀಡಾಕೂಟದಿಂದ ತೆಗೆದುಹಾಕಿರುವುದು ಹಿನ್ನಡೆಯನ್ನುಂಟುಮಾಡಿದಂತಾಗಿದೆ.

ಯಾವ ಹತ್ತು ಕ್ರೀಡೆಗಳು ಕಾಮನ್‌ವೆಲ್ತ್‌ನಲ್ಲಿ ಇರುವುದಿಲ್ಲ; ಹಾಕಿ, ಕ್ರಿಕೆಟ್‌, ಟೇಬಲ್‌ ಟೆನಿಸ್‌, ಕುಸ್ತಿ, ಬ್ಯಾಡ್ಮಿಂಟನ್‌, ರಗ್ಬಿ ಸೆವೆನ್ಸ್‌, ಬೀಚ್‌ ವಾಲಿಬಾಲ್‌, ಮೌಂಟೈನ್‌ ಬೈಕಿಂಗ್‌, ಸ್ಕ್ವಾಷ್‌ ಮತ್ತು ರಿಥೆಮಿಕ್‌ ಜಿಮ್ನಾಸ್ಟಿಕ್.

Tags: