ಪ್ಯಾರಿಸ್: ಪುರುಷರ ರಿಕರ್ವ್ ಆರ್ಚರಿಯ ವಿಭಾಗದಲ್ಲಿ ಭಾರತದ ಹರ್ವಿಂದರ್ ಸಿಂಗ್ ಬಧುವಾರ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ಆರ್ಚರಿಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ದಾಖಲೆಯನ್ನು ಹರ್ವಿಂದರ್ ಸಿಂಗ್ ಬರೆದಿದ್ದಾರೆ.
ಹರ್ವಿಂದರ್ ಸಿಂಗ್ ಅವರು ಪುರುಷರ ವೈಯಕ್ತಿಕ ರಿಕರ್ವ್ ಸೆಮಿ ಫೈನಲ್‌ನಲ್ಲಿ ಇರಾನ್‌ನ ಮೊಹಮ್ಮದ ರೆಜಾ ಅರಬ್ ಅಮೆರಿ ಹಾಗೂ ಫೈನಲ್‌ನಲ್ಲಿ ಪೋಲೆಂಡ್‌ನ ಲುಕಾಸ್ಜ್ ಸಿಸ್ಜೆಕ್ ಅವರನ್ನು ಮಣಿಸಿ ಚಿನ್ನದ ಪದಕ ಪಡೆದುಕೊಂಡಿದರು.
ಈ ಹಿಂದಿನ ಟೋಕಿಯೋ ಪ್ಯಾರಲಿಂಪಿಕ್ಸ್‌ನ ಇದೇ ವಿಭಾಗದಲ್ಲಿ ಹರ್ವಿಂದರ್ ಸಿಂಗ್ ಕಂಚಿನ ಪದಕ ಗೆದ್ದಿದ್ದರು.