Mysore
21
overcast clouds
Light
Dark

ಹಾರ್ದಿಕ್‌ ಪಾಂಡ್ಯ ಪತ್ನಿಯೊಂದಿಗೆ ದಿಶಾ ಪಠಾಣಿ ಗೆಳೆಯ

ಮುಂಬೈ: ಟೀಂ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಪತ್ನಿ ನತಾಶ ಸ್ಟಾನ್ಕೊವಿಕ್‌ಗೆ ವಿಚ್ಚೇದನ ನೀಡಲಿದ್ದಾರೆ ಎಂಬ ಊಹಾಪೋಹಗಳಿಗೆ ಪುಷ್ಠಿ ನೀಡುವಂತೆ ಪಾಂಡ್ಯ ಪತ್ನಿ ಸ್ಟಾರ್‌ ನಟಿ ಬಾಯ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಮುಂಬೈನ ಬಾಂದ್ರಾ ಕೆಫೆಯೊಂದರಲ್ಲಿ ಬಾಲಿವುಡ್‌ ನಟಿ ದಿಶಾ ಪಠಾಣಿ ಬಾಯ್‌ಫ್ರೆಂಡ್‌ ಎಂದು ಹೇಳಲಾಗಿರುವ ಅಲೆಕ್ಸ್‌ ಅಲೆಕ್ಸಾಂಡರ್‌ ಅವರ ಜತೆ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಜೂಮ್‌ ಟಿವಿ ತನ್ನ ಇನ್‌ಸ್ಟಾ ಗ್ರಾಂ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ನತಾಶ ಅವರು ಅಲೆಕ್ಸಾಂಡರ್‌ ಜತೆ ಬಿಂದಾಸ್‌ ಲುಕ್‌ನಲ್ಲಿ ಕಾಣಸಿಕೊಂಡಿದ್ದಾರೆ.

ಇನ್ನು ನತಾಶ ಹಾಗೂ ಪಾಂಡ್ಯ 2022ರಲ್ಲಿ ಸರಳವಾಗಿ ಮದುವೆಯಾಗಿದ್ದರು. ಮತ್ತು 2023ರಲ್ಲಿ ಈ ಜೋಡಿ ಅದ್ದೂರಿಯಾಗಿ ಮದುವೆಯಾಗಿದ್ದರು. ಈ ಜೋಡಿಗೆ ಅಗಸ್ತ್ಯ ಎಂಬ ಗಂಡು ಮಗ ಇದ್ದಾನೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ನತಾಶ ಅವರು ವಿಚ್ಚೇದನ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ಈ ಜೋಡಿಯು ನೀಡಿಲ್ಲ.