ಜೂನ್.20ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಕೆಲವೇ ದಿನಗಳ ಮೊದಲು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಇಂಗ್ಲೆಂಡಿನಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ.
ಗೌತಮ್ ಗಂಭೀರ್ ಅವರ ತಾಯಿಗೆ ಹೃದಯಾಘಾತವಾದ ಕಾರಣ ಮನೆಗೆ ಮರಳಿದ್ದು, ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಗೌತಮ್ ಗಂಭೀರ್ ಅವರ ತಾಯಿ ಸೀಮಾ ಅವರು ಜೂನ್.11ರಂದು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಗೌತಮ್ ಗಂಭೀರ್ ಭಾರತಕ್ಕೆ ಮರಳಿದ್ದಾರೆ.
ಇನ್ನು ಮಾಹಿತಿ ಪ್ರಕಾರ ಜೂನ್.17ರಂದು ಗೌತಮ್ ಗಂಭೀರ್ ಅವರು ತಂಡವನ್ನು ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.