Mysore
23
overcast clouds
Light
Dark

ರಾಹುಲ್‌ ದ್ರಾವಿಡ್‌ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್‌ ಆಗಿ ಗಂಭಿರ್‌ ನೇಮಕ!

ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅವರ ಅವಧಿ ಮುಗಿದ ಬೆನ್ನಲ್ಲೇ ಅವರ ಉತ್ತರಾಧಿಕಾರಿಯಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಇಂಡಿಯಾ ಟುಡೆ ವರದಿ ಮಾಡಿದೆ. ಇದೇ ಜೂನ್‌ ಅಂತ್ಯಕ್ಕೆ ರಾಹುಲ್‌ ದ್ರಾವಿಡ್‌ ಅವರ ಕೋಚ್‌ ಅವಧಿ ಮುಕ್ತಾಯಗೊಳ್ಳಲಿದ್ದು, ಇದಾದ ಬಳಿಕ ಗಂಭೀರ್‌ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಟೀಂ ಇಂಡಿಯಾ ಕೋಚ್‌ ಆಗಿ ನೇಮಕಗೊಳ್ಳಲು ಸಾವಿರಾರು ಅರ್ಜಿಗಳು ಬಂದಿದ್ದವು. ಅದರಲ್ಲಿ ಹಲವಾರು ಅನುಭವಿಗಳು ಸಹಾ ಟೀಂ ಇಂಡಿಯಾದ ಕೋಚ್‌ ಆಗಿ ಕೆಲಸ ನಿರ್ವಹಿಸಲು ಆಸಕ್ತಿ ತೋರಿದ್ದರು. ಇದ್ಯಾವುದಕ್ಕು ಮಣೆ ಹಾಕದ ಬಿಸಿಸಿಐ ಗೌತಮ್‌ ಗಂಭಿರ್‌ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ನಡೆದ 17ನೇ ಸೀಸನ್‌ ಐಪಿಎಲ್‌ನಲ್ಲಿ ಕೊಲ್ಕತ್ತಾ ಉತ್ತಮ ಆಟ ಪ್ರದರ್ಶಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಈ ತಂಡದ ಮುಖ್ಯ ಕೋಚ್‌ ಆಗಿ ಗೌತಮ್‌ ಗಂಭಿರ್‌ ಕಾಣಿಸಿಕೊಂಡಿದ್ದರು. ಮತ್ತು ಐಪಿಎಲ್‌ ಮುಗಿದ ಬಳಿಕ ಐಪಿಎಲ್‌ ಫ್ರಾಂಚೈಸಿ ಮಾಲೀಕರೊಬ್ಬರು ಗಂಭೀರ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾಗುತ್ತದೆ ಎಂದು ಹೇಳಿದ್ದರು. ಇದು ಗಂಭೀರ್‌ ಅವರ ಬಗ್ಗೆ ಬದ್ದ ಬಿಗ್‌ ಅಪ್‌ಡೇಟ್‌ ಆಗಿತ್ತು.

ಇಂಡಿಯಾ ಟುಡೆ ವರದಿ ಬೆನ್ನಲ್ಲೇ ಗಂಭೀರ್‌ ಅವರ ನೇಮಕ ಬಹುತೇಕ ಖಚಿತ ಎಂದು ಹೇಳಲಾಗುತ್ತಿದ್ದು, ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ ಮುಖ್ಯ ಕೋಚ್‌ ಹುದ್ದೆಗೆ ಗಂಭೀರ್‌ ಅವರನ್ನು ಸಂದರ್ಶನ ಮೂಲಕ ನೇಮಕ ಮಾಡಲಿದೆಯಾ ಅಥವಾ ನೇರವಾಗಿ ಆಯ್ಕೆ ಮಾಡಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.