Mysore
22
overcast clouds

Social Media

ಬುಧವಾರ, 16 ಜುಲೈ 2025
Light
Dark

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಶುಭಾರಂಭ.. ಸಾತ್ವಿಕ್‌-ಚಿರಾಗ್‌ ಜೋಡಿಗೆ ಮೊದಲ ಗೆಲುವು

ಪ್ಯಾರಿಸ್:‌ ಪ್ಯಾರಿಸ್‌ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತದ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಜೋಡಿಯು ಶನಿವಾರ(ಜು.27) ಇಲ್ಲಿ ನಡೆದ ಪುರುಷರು ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದೆ. ಪುರುಷರ ಸಿಂಗಲ್ಸ್‌ನಲ್ಲಿಯೂ ಲಕ್ಷ್ಯಸೇನ್‌ ಮೊದಲ ಸುತ್ತಿನಲ್ಲಿ ಮುನ್ನಡೆದರು.

ಈ ಇಬ್ಬರ ಜೋಡಿಯ ಅಬ್ಬರದ ಆಟದ ಮುಂದೆ ಫ್ರಾನ್ಸ್‌ನ ಲುಕಾಸ್‌ ಕೋರ್ವಿ ಹಾಗೂ ರೋನನ್‌ ಲಾಬರ್‌ ಮಂಡಿಯೂರಿದ್ದಾರೆ. ಒಟ್ಟು 48 ನಿಮಿಷಗಳ ಕಾಲ ಸೆಣೆಸಾಡಿದ ಈ ಜೋಡಿ 21-17, 21-14 ಅಂತರದಲ್ಲಿ ಗೆಲುವು ಸಾಧಿಸಿದೆ.

ಮೊದಮೊದಲು ಫ್ರಾನ್ಸ್‌ ಜೋಡಿ ಭಾರತದ ಚಿರಾಗ್‌ ಹಾಗೂ ಸಾತ್ವಿಕ್‌ ವಿರುದ್ಧ ಹಿಡಿತ ಸಾಧಿಸಿದ್ದರೂ ನಂತರ ಪುಟಿದೆದ್ದ ಚಿರಾಗ್‌ ಹಾಗೂ ಸಾತ್ವಿಕ್‌ ಒಂದೇ ಒಂದು ಪಾಯಿಂಟ್ಸ್‌ ಬಿಡದ ಹಾಗೆ ಅವರನ್ನು ಎದುರಿಸಿದರು. ಭಾರತದ ಈ ಜೋಡಿ ಸೋಮವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಜರ್ಮನಿಯ ಮಾರ್ಕ್‌ ಲ್ಯಾಮ್ಸ್‌ಫಸ್‌ ಮತ್ತು ಮಾರ್ವಿನ್‌ ಸೀಡೆಲ್‌ ಅವರನ್ನು ಎದುರಿಸಲಿದ್ದಾರೆ.

ಸೇನ್‌ಗೆ ಮೊದಲು ಗೆಲುವು: 22ರ ಹರೆಯದ ಲಕ್ಷ್ಯಸೇನ್‌ಗೆ ಇದು ಮೊದಲ ಒಲಿಂಪಿಕ್ಸ್‌. ಸಿಂಗಲ್ಸ್‌ ವಿಭಾಗದ ಎ ಗುಂಪಿನ ಪಂದ್ಯದಲ್ಲಿ ಗ್ವಾಟೆಮಾಲಾದ ಕೆವಿನ್‌ ಕಾರ್ಡ್‌ನ್‌ ಅವರನ್ನು ನೇರ ಆಟಗಳಲ್ಲಿ ಸೋಲುಣಿಸಿದರು.

ಸೇನ್‌ ಅವರು 42 ನಿಮಿಷಗಳ ಪಂದ್ಯದಲ್ಲಿ 21-8, 22-20 ರ ಅಂತರದಲಿ ಕಾರ್ಡನ್‌ ವಿರುದ್ಧ ಗೆದ್ದು ಬೀಗಿದರು. ಸೋಮವಾರ ನಡೆಯಲಿರುವ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್‌ ಕರಾಗ್ಗಿ ಅವರನ್ನು ಸೇನ್‌ ಎದುರಿಸಲಿದ್ದಾರೆ.

 

Tags:
error: Content is protected !!