Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಫ್ರೆಂಚ್‌ ಓಪನ್‌: ಕಿರೀಟ ಉಳಿಸಿಕೊಂಡ ಸ್ವಿಯಾಟೆಕ್‌

ಪ್ಯಾರಿಸ್‌: ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌ “ಪ್ಯಾರಿಸ್‌ ರಾಣಿ’”ಪಟ್ಟದಲ್ಲಿ ಮುಂದುವರಿದಿದ್ದಾರೆ. ಹಾಲಿ ಚಾಂಪಿಯನ್‌ ಆಗಿರುವ ಅವರು ಶನಿವಾರದ ಪ್ರಶಸ್ತಿ ಕಾಳಗದಲ್ಲಿ ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಮುಕ್ಸೋವಾ ಅವರ ಆಟವನ್ನು 6-2, 5-7, 6-4 ಅಂತರದಿಂದ ಮುಗಿಸಿದರು.

ಮೊದಲ ಸೆಟ್‌ನ್ನು ಸುಲಭದಲ್ಲಿ ವಶಪಡಿಸಿಕೊಂಡ ಸ್ವಿಯಾಟೆಕ್‌, ದ್ವಿತೀಯ ಸೆಟ್‌ನಲ್ಲಿ ಎಡವಿದರು. ನಿರ್ಣಾಯಕ ಸೆಟ್‌ನ ಒಂದು ಹಂತದಲ್ಲಿ ಹಿನ್ನಡೆಯಲ್ಲಿದ್ದರು. ಆದರೆ ಮುಕ್ಸೋವಾಗೆ ಅದೃಷ್ಟ ಕೈಕೊಟ್ಟಿತು.

ಈ ಜಯದೊಂದಿಗೆ ಸ್ವಿಯಾಟೆಕ್‌ ಮೂರೂ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಜಯಭೇರಿ ಮೊಳಗಿಸಿದಂತಾಯಿತು. ಮುಕ್ಸೋವಾ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗೆ ಲಗ್ಗೆ ಇರಿಸಿದ್ದರು.

22 ವರ್ಷದ ಸ್ವಿಯಾಟೆಕ್‌ 2005-07ರ ಬಳಿಕ ಇಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂದು ಜಸ್ಟಿನ್‌ ಹೆನಿನ್‌ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದ್ದರು. ಹಾಗೆಯೇ ತಮ್ಮ ಮೊದಲ ನಾಲ್ಕೂ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗ‌ಳನ್ನು ಗೆದ್ದ 3ನೇ ಆಟಗಾರ್ತಿ ಎನಿಸಿದರು. ಉಳಿ ದಿಬ್ಬರೆಂದರೆ ಮೋನಿಕಾ ಸೆಲೆಸ್‌ ಮತ್ತು ನವೋಮಿ ಒಸಾಕಾ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ