Mysore
20
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಫುಟ್ಬಾಲ್‌ | ಭರ್ಜರಿ ಗೆಲುವು ಸಾಧಿಸಿದ ಮಿನರ್ವಾ ಸ್ಕೂಲ್‌

ಬೆಂಗಳೂರು : 64ನೇ ಸುಬ್ರೋತೋ ಕಪ್ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಮೆಂಟ್ನ ಸಬ್ ಜೂನಿಯರ್ ಬಾಲಕರು ವಿಭಾಗದ ರೋಮಾಂಚಕ ಅಂತಿಮ ಪಂದ್ಯದಲ್ಲಿ, ಮಿನರ್ವಾ ಪಬ್ಲಿಕ್ ಸ್ಕೂಲ್, ಮೋಹಾಲಿ (CISCE) ತಂಡವು 6–0 ಅಂತರದಲ್ಲಿ ವಿದ್ಯಾಚಲ್ ಇಂಟರ್ನ್ಯಾಷನಲ್ ಸ್ಕೂಲ್, ಮುಜಫ್ಫರ್ಪುರ (ಬಿಹಾರ) ವಿರುದ್ಧ ಭರ್ಜರಿ ಜಯ ಸಾಧಿಸಿತು.

ಮಿನರ್ವಾ ಪಬ್ಲಿಕ್ ಸ್ಕೂಲ್ ಗಳಿಸಿದ ಗೋಲುಗಳು: ಮಹೇಶ್ (4’, 50+1’) ಲೆಟ್ಗೌಹಾವ್ ಕಿಪ್ಜನ್ (19’, 35’) ಬಿಕ್ಸನ್ (37’) ರಿಮೋಸನ್ (42’)

ಈ ದಿನದ ಅಂತಿಮ ಪಂದ್ಯಕ್ಕೆ ಪ್ರಮುಖ ಅತಿಥಿಯಾಗಿ ಏರ್ ಮಾರ್ಷಲ್ ತೇಜಿಂದರ್ ಸಿಂಗ್ AVSM VM, AOC-in-C, ತರಬೇತಿ ಕಮಾಂಡ್ ಉಪಸ್ಥಿತರಿದ್ದರು. ಅತಿಥಿ ಗೌರವವಾಗಿ ಶ್ರೀ ಪಿ.ಆರ್. ಶ್ರೀಜೇಶ್, ಪದ್ಮ ಭೂಷಣ್, ಪದ್ಮಶ್ರೀ, ಮೇಜರ್ ಧ್ಯಾನಚಂದ್ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ (ಗೋಲ್ಕೀಪರ್) ಹಾಜರಿದ್ದರು.

ಇದನ್ನು ಓದಿ: ಸುಬ್ರೋಟೋ ಕಪ್ ನಲ್ಲಿ ಯುವ ತಾರೆಗಳ ಮೆರುಗು: ಹರಿಯಾಣ-ಬಂಗಾಳ ಭರ್ಜರಿ ಗೆಲುವು!

ಈ ಟೂರ್ನಮೆಂಟ್ ನ ವಿಜೇತ ತಂಡಕ್ಕೆ ₹4,00,000 ಲಕ್ಷ ಹಾಗು ರನ್ನರ್ ಅಪ್ ತಂಡಕ್ಕೆ ₹2,00,000 ಲಕ್ಷ ಬಹುಮಾನ ನೀಡಲಾಯಿತು.

ವೈಯಕ್ತಿಕ ಪ್ರಶಸ್ತಿ ವಿಜೇತರು: ಉತ್ತಮ ಆಟಗಾರ (₹40,000): ಲೆಟ್ಗೌಹಾವ್ ಕಿಪ್ಜನ್, CISCE ಉತ್ತಮ ಕೋಚ್ (₹25,000): ಕರಣ್ ಕುಮಾರ್, ಬಿಹಾರ ಉತ್ತಮ ಗೋಲ್ಕೀಪರ್ (₹25,000): ಗುರ್ಜಿತ್ ವೀರ, CISCE ಫೇರ್ ಪ್ಲೇ ಅವಾರ್ಡ್ (₹50,000): ನವೋದಯ ವಿದ್ಯಾಲಯ ಸಮಿತಿ (NVS) ಉತ್ತಮ ಶಾಲೆ (₹40,000): ವಿದ್ಯಾಚಲ್ ಇಟರ್ನ್ಯಾಷನಲ್ ಸ್ಕೂಲ್, ಮುಜಫ್ಫರ್ಪುರ (ಬಿಹಾರ)

Tags:
error: Content is protected !!