Mysore
26
clear sky

Social Media

ಗುರುವಾರ, 22 ಜನವರಿ 2026
Light
Dark

ತಂದೆಗೆ ಹೃದಯಾಘಾತ : ಇಂದು ನಡೆಯೇಕಿದ್ದ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ

ಮುಂಬೈ : ಮಹಿಳಾ ಕ್ರಿಕೆಟ್ ಟೀಂ ಇಂಡಿಯಾದ ಪ್ರಮುಖ ಆಟಗಾರ್ತಿ ಸ್ಮೃತಿ ಮಂಧಾನಾ ಅವರ ವಿವಾಹ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಮಂಧಾನಾ ಅವರ ಹುಟ್ಟೂರು ಸಾಂಗ್ಲಿಯಲ್ಲಿ ನ.23 ರಂದು ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಮದುವೆ ಕಾರ್ಯಕ್ರಮ ನಡೆಯುತ್ತಿದ್ದಾಗ ಸ್ಮೃತಿ ಮಂಧಾನಾ ಅವರ ತಂದೆ ಶ್ರೀನಿವಾಸ್‌ ಅವರಿಗೆ ಲಘು ಹೃದಯಾಘಾತ ಸಂಭವಿಸಿದೆ. ಅನಾರೋಗ್ಯಕ್ಕೆ ಒಳಗಾದ ಬೆನ್ನಲ್ಲೇ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಅಂಬುಲೆನ್ಸ್‌ ಬಂದು ಶ್ರೀನಿವಾಸ್‌ ಅವರನ್ನು ಕರೆದುಕೊಂಡು ಹೋಗಿದೆ.

ಇದನ್ನು ಓದಿ: ಮದುವೆ ಸಂಭ್ರಮದಲ್ಕಿ ಕ್ರಿಕೆಟ್ ತಾರೆ ಮಂಧಾನ : ವಿಡಿಯೋ ಸಕತ್ ವೈರಲ್

ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ, ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಅವರ ವಿವಾಹ ಕಾರ್ಯಕ್ರಮ ಭರ್ಜರಿಯಾಗಿ ನಡೆದಿತ್ತು. ಇವರ ವಿವಾಹ ಸಂಭ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅರಿಶಿನ ಶಾಸ್ತ್ರದ ವಿಡಿಯೋಗಳಿಂದ ಹಿಡಿದು ವಧು ಮತ್ತು ವರನ ತಂಡಗಳ ನಡುವಿನ ಸ್ನೇಹಪರ ಕ್ರಿಕೆಟ್ ಪಂದ್ಯದವರೆಗೆ, ಮದುವೆಗೆ ಮುನ್ನ ಹಲವು ಮನಮೋಹಕ ಕ್ಷಣಗಳು ಅನಾವರಣಗೊಂಡಿವೆ. ಹೊಸದಾಗಿ ಬಿಡುಗಡೆಯಾಗಿರುವ ವಿಡಿಯೋದಲ್ಲಿ, ಸ್ಮೃತಿ ಮತ್ತು ಪಲಾಶ್ ಇಬ್ಬರೂ ಅತ್ಯಂತ ಸುಂದರವಾಗಿ, ಸಂಪೂರ್ಣವಾಗಿ ಕೊರಿಯೋಗ್ರಾಫ್ ಮಾಡಿದ ನೃತ್ಯವನ್ನು ಪ್ರದರ್ಶಿಸಿದ್ದಾರೆ.

ಈ ಮೊದಲು, ಅರಿಶಿನ ಶಾಸ್ತ್ರದಲ್ಲಿ ಸ್ಮೃತಿ ಮತ್ತು ಪಲಾಶ್ ಇಬ್ಬರೂ ಖುಷಿಯಿಂದ ನೃತ್ಯ ಮಾಡಿದ್ದು, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಹ ಸಾಥ್ ನೀಡಿ, ವಧುವಿನ ತಂಡವಾಗಿ ಹೆಜ್ಜೆ ಹಾಕಿರುವ ದೃಶ್ಯಗಳು ಹೆಚ್ಚು ವೈರಲ್ ಆಗಿವೆ.

Tags:
error: Content is protected !!