Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸ್ಮೃತಿ ಮಂಧಾನಗೆ ಭಾವಿ ಪತಿಯಿಂದ ಮೋಸ ಆಗಿದ್ಯಾ..? ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ; ಆರ್‌ಸಿಬಿ ನಾಯಕಿ ಭಾವುಕ

ಬೆಂಗಳೂರು : ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ನಾಯಕಿ, ಕನ್ನಡಿಗರ ಮನೆಗೆ ಮೊದಲ ಬಾರಿಗೆ ಐಪಿಎಲ್ ಕಪ್ ಗೆಲ್ಲಿಸಿ ಕೊಟ್ಟಿದ್ದ ಸ್ಮೃತಿ ಮಂಧಾನ ಜೀವನ ಅಲ್ಲೋಲ ಕಲ್ಲೋಲ ಆಗಿ ಹೋಗಿದೆ. ಸ್ಮೃತಿ ಮಂಧಾನ ಮದುವೆ ದಿಢೀರ್ ನಿಂತು ಹೋದ ನಂತರ ಭಾರಿ ದೊಡ್ಡ ಸಂಚಲನ ಕೂಡ ಸೃಷ್ಟಿಯಾಗಿದೆ. ಸ್ಮೃತಿ ಮಂಧಾನ ಅಭಿಮಾನಿಗಳು ಕೂಡ ಈಗ ಕಣ್ಣೀರು ಹಾಕುತ್ತಾ, ತಮ್ಮ ನೆಚ್ಚಿನ ಆಟಗಾರ್ತಿಗೆ ಮೋಸ ಆಯ್ತಲ್ಲಾ ಅಂತಾ ಭಾವುಕರಾಗಿದ್ದಾರೆ.

ಇಂತಹ ಸಮಯದಲ್ಲೇ ಆರ್‌ಸಿಬಿ ನಾಯಕಿ ತಂದೆಯ ಸಾವು ಬದುಕಿನ ಹೋರಾಟ, ಭಾವಿ ಗಂಡನಿಂದನೇ ಮಹಾನ್ ಮೋಸ ಆಗಿದ್ಯಾ? ಎಂಬ ಚರ್ಚೆಯಾಗುತ್ತಿವೆ.

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರರೂ ಆಗಿರುವ ಸ್ಮೃತಿ ಮಂಧಾನ, ಮಹಿಳಾ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಅಂತಾ ಅಭಿಮಾನಿಗಳು ಹೊಗಳುತ್ತಾರೆ. ಹೀಗೆಲ್ಲಾ ಭಾರಿ ದೊಡ್ಡ ಹೆಸರು ಮಾಡಿರುವ ಸ್ಮೃತಿ ಮಂಧಾನ ಅವರ ಮದುವೆ ದಿಢೀರ್ ಮುರಿದು ಹೋಗಿತ್ತು, ಆ ನಂತರ ಸಂಚಲನ ಸೃಷ್ಟಿಯಾಗಿತ್ತು. ಅಲ್ಲದೆ ಭಾವಿ ಗಂಡನಿಗೆ ಬೇರೆ ಬೇರೆ ಹುಡುಗಿಯರ ಜೊತೆ ಆತ್ಮೀಯ ಸ್ನೇಹ ಇತ್ತು ಎಂಬ ಆರೋಪ ಕೇಳಿಬಂದಿತ್ತು.

ಹೌದು, ಸ್ಮೃತಿ ಮಂಧಾನ ಅವರು ತಮ್ಮ ಮದುವೆ ನಿಂತು ಹೋದ ನಂತರ ಹೊರಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸ್ಮೃತಿ ಮಂಧಾನ ಮನೆಯಲ್ಲೇ ಕೂತು ಕಣ್ಣೀರು ಹಾಕುತ್ತಿದ್ದಾರೆ, ಭಾವುಕರಾಗಿ ಅಳುತ್ತಿದ್ದಾರೆ ಎಂಬ ಸುದ್ದಿಗಳು ಅವರ ಅಭಿಮಾನಿಗಳ ಎದೆಯಲ್ಲಿ ತಲ್ಲಣದ ಬೆಂಕಿ ಜ್ವಾಲೆಯನ್ನೇ ಸೃಷ್ಟಿಸಿವೆ. ಹೀಗಿದ್ದಾಗಲೇ ಆರ್‌ಸಿಬಿ ನಾಯಕಿ ತಂದೆಯ ಸಾವು- ಬದುಕಿನ ಹೋರಾಟ, ಭಾವಿ ಗಂಡನಿಂದನೇ ಮಹಾನ್ ಮೋಸ ಆಗಿದ್ಯಾ ಎಂದು ಚರ್ಚೆಯಾಗುತ್ತಿದೆ.

ಸ್ಮೃತಿ ಮಂಧಾನ ಅವರಿಗೆ ಮಹಾಮೋಸ ಆಯ್ತಾ…

ಕನ್ನಡಿಗರ ಮನೆ ಮಗಳು ಸ್ಮೃತಿ ಮಂಧಾನ ಅವರಿಗೆ ಇದೀಗ ಮಹಾನ್ ಮೋಸ ಆಗಿದೆ ಎಂಬ ಆರೋಪವನ್ನ ಮಾಡಲಾಗುತ್ತಿದೆ. ಅದರಲ್ಲೂ ಆರ್‌ಸಿಬಿ ನಾಯಕಿ ತಂದೆಯು ಆಸ್ಪತ್ರೆಯಿಂದ ಮನೆಗೆ ವಾಪಸ್ ಬಂದಿದ್ದರೂ, ಸ್ಮೃತಿ ಮಂಧಾನ ಅವರ ತಂದೆ ಆರೋಗ್ಯ ತುಂಬಾ ಸೂಕ್ಷ್ಮವಾಗಿದೆ ಎಂಬ ವರದಿಗಳು ಮತ್ತಷ್ಟು ಚಿಂತೆ ತರಿಸಿವೆ. ಇಷ್ಟೆಲ್ಲಾ ಆತಂಕ ಹುಟ್ಟಿಸುವ ಗಾಳಿ ಸುದ್ದಿಗಳ ನಡುವೆಯೇ, ಭಾವಿ ಗಂಡನಿಂದನೇ ಮಹಾನ್ ಮೋಸ ಆಗಿದ್ಯಾ? ಎಂಬ ಚರ್ಚೆ ಕೂಡ ಜೋರಾಗಿದೆ. ಅಂದಹಾಗೆ ಸ್ಮೃತಿ ಮಂಧಾನ ಅವರು ಮದುವೆ ಆಗಬೇಕಿದ್ದ ಹುಡುಗ ಅಂದರೆ ಸ್ಮೃತಿ ಮಂಧಾನ ಅವರ ಭಾವಿ ಗಂಡ ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿಯ ಜೊತೆಗೆ ರಾತ್ರಿ ವೇಳೆ ಕಾರಿನಲ್ಲಿ ಕುಳಿತು ಹಾಡು ಹೇಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಈ ವಿಡಿಯೋ ಹಳೆಯದ್ದು ಎಂಬ ವಿಚಾರ ಗೊತ್ತಾದ ನಂತರ ಕೂಡ, ಇದೀಗ ಬೇರೆ ಬೇರೆ ಹುಡುಗಿ ಜೊತೆಗೆ ಅವರಿಗೆ ಆತ್ಮೀಯ ಸ್ನೇಹ ಇತ್ತು ಎಂಬ ಆರೋಪವನ್ನ ಸೋಷಿಯಲ್ ಮೀಡಿಯಾದಲ್ಲಿ ಈಗ ಮಾಡಲಾಗುತ್ತಿದೆ.

ಏನದು ಸ್ಕ್ರೀನ್‌ಶಾಟ್‌?

ಪಲಾಶ್ ಮತ್ತು ಮೇರಿ ಡಿ’ಕೋಸ್ಟಾ ಎಂಬ ಮಹಿಳೆಯ ನಡುವೆ ನಡೆದ ಚಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮೇರಿ ಡಿ’ಕೋಸ್ಟಾ ಸ್ವತಃ, ಪಲಾಶ್ ಮೇ 2025 ರಲ್ಲಿ ತನ್ನೊಂದಿಗೆ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದರು ಎಂದು ಬಹಿರಂಗಪಡಿಸಿದರು. ಆದಾಗ್ಯೂ, ಮೇರಿ ತಾನು ಪಲಾಶ್ ಅವರನ್ನು ಎಂದಿಗೂ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ. ಈಗ, ಪಲಾಶ್‌ಗೆ ಸಂಬಂಧಿಸಿದ ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಆದರೆ, ಈ ಬಗ್ಗೆ ಸ್ಮೃತಿ ಮತ್ತು ಪಲಾಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tags:
error: Content is protected !!