Mysore
21
overcast clouds
Light
Dark

ಲೋಕಸಮರ 2024: ದೆಹಲಿಯಲ್ಲಿ ಮತದಾನ ಮಾಡಿದ ಗೌತಮ್‌ ಗಂಭೀರ್‌, ಮಹಿಳೆಯರು ಹೆಚ್ಚು ಮತದಾನ ಮಾಡಿ ಎಂದ ನಮೋ

ನವದೆಹಲಿ: ಇಂದು ದೇಶಾದ್ಯಂತ 6ನೇ ಹಂತದ ಮತದಾನ ನಡೆಯುತ್ತಿದೆ. 8 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 58 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಬಿರುಸಿನ ಮತದಾನ ಆರಂಭಗೊಂಡಿದ್ದು, ಈಗಾಗಲೇ ಮತದಾನ ಆರಂಭವಾಗಿದ್ದು, ದೆಹಲಿಯ ಎಲ್ಲಾ 7 ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ.

ಪೂರ್ವ ದೆಹಲಿ ಎಂಪಿ, ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಅವರು ಇಂದು ಬೆಳಿಗ್ಗೆಯೇ ಮತದಾನ ಮಾಡಿದರು.

ಇನ್ನು ಮತದಾನದ ಬಗ್ಗೆ ಮಾತನಾಡಿರುವ ಪಿಎಂ ನರೇಂದ್ರ ಮೋದಿ ಅವರು, 2024ರ ಲೋಕಸಭೆ ಚುನಾವಣೆಯ 6ನೇ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ನಾನು ವಿನಂತಿಸುತ್ತೇನೆ. ಪ್ರತಿ ಮತವೂ ಎಣಿಕೆಯಾಗುತ್ತದೆ, ನಿಮ್ಮನ್ನೂ ಎಣಿಕೆ ಮಾಡಿ! ಅದರ ಜನರು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಮತ್ತು ಸಕ್ರಿಯವಾಗಿದ್ದಾಗ ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುತ್ತದೆ. ಮಹಿಳಾ ಮತದಾರರು ಮತ್ತು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ವಿಶೇಷವಾಗಿ ವಿನಂತಿಸುತ್ತೇನೆ ಎಂದು ಟ್ವೀಟ್‌ ಮಾಡಿ ಮತದಾನ ಮಾಡಲು ಪ್ರೇರೇಪಿಸಿದ್ದಾರೆ.

58 ಕ್ಷೇತ್ರಗಳ ಪೈಕಿ ಬಿಹಾರದ 8, ಹರ್ಯಾಣದ ಎಲ್ಲಾ 10 ಕ್ಷೇತ್ರಗಳು, ಜಮ್ಮು ಕಾಶ್ಮೀರಾದ 1, ಜಾರ್ಖಂಡ್‌ 4, ದೆಹಲಿಯ ಎಲ್ಲಾ 7 ಕ್ಷೇತ್ರಗಳು, ಒಡಿಶಾದ 6, ಉತ್ತರ ಪ್ರದೇಶದ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇನ್ನು ಈ ಅಖಾಡದಲ್ಲಿ ಒಟ್ಟು 889 ಅಭ್ಯರ್ಥಿಗಳಿದ್ದಾರೆ.

Tags: