Mysore
22
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮದುವೆ ಸಂಭ್ರಮದಲ್ಕಿ ಕ್ರಿಕೆಟ್ ತಾರೆ ಮಂಧಾನ : ವಿಡಿಯೋ ಸಕತ್ ವೈರಲ್

ಮುಂಬೈ : ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಮದುವೆ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಅವರ ವಿವಾಹ ಪೂರ್ವ ಕಾರ್ಯಕ್ರಮಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಅರಿಶಿನ ಶಾಸ್ತ್ರದ ಆಚರಣೆಯ ವೀಡಿಯೊಗಳಿಂದ ಹಿಡಿದು ವರ ಮತ್ತು ವಧುವಿನ ನೇತೃತ್ವದ ತಂಡಗಳ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯದವರೆಗಿನ ಕೆಲವು ಮೋಡಿಮಾಡುವ ವಿಡಿಯೋಗಳು ಸಾಕಷ್ಟು ಗಮನ ಸೆಳೆದಿವೆ. ಈಗ ಸ್ಮೃತಿ ಮತ್ತು ಪಲಾಶ್ ಮಸ್ತ್ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.

ಪಲಾಶ್ ಅವರ ಕುತ್ತಿಗೆಗೆ ಸ್ಮೃತಿ ಹಾರ ಹಾಕುದ ಬಳಿಕ ಪಲಾಶ್ ಭಾರತೀಯ ಮಹಿಳಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮುಂದೆ ನಮಸ್ಕರಿಸುತ್ತಾರೆ. ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ.

ಸಾಮಾನ್ಯವಾಗಿ ಅಂತರ್ಮುಖಿ ಎಂದು ಪರಿಗಣಿಸಲಾಗುವ ಸ್ಮೃತಿ ವೇದಿಕೆಯನ್ನು ಈ ರೀತಿ ನೋಡಿ, ಭಾರತೀಯ ಕ್ರಿಕೆಟ್ ತಂಡವೇ ನಿಬ್ಬೆರಗಾಗಿದೆ. ಈ ವೇಳೆ ಕನ್ನಡದ ಶ್ರೇಯಾಂಕಾ ಪಾಟೀಲ್ ಸೇರಿದಂತೆ ಹಲವು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಹ ಹೆಜ್ಜೆ ಹಾಕಿದ್ದಾರೆ.

Tags:
error: Content is protected !!