Mysore
31
scattered clouds

Social Media

ಶನಿವಾರ, 22 ಮಾರ್ಚ್ 2025
Light
Dark

ಕಾಮನ್ ವೆಲ್ತ್ ಗೇಮ್ಸ್ : ಕುಸ್ತಿಪಟು ದೀಪಕ್ ಪೂನಿಯಾ ಗೆ ಚಿನ್ನ

ಬರ್ಮಿಂಗ್ ಹ್ಯಾಮ್ : ಕಾಮನ್ವೆಲ್ತ್ ಕ್ರೀಡಾಕೂಟ 2022 ರ ಕುಸ್ತಿ ವಿಭಾಗದಲ್ಲಿ ಭಾರತೀಯ ದೀಪಕ್ ಪೂನಿಯಾ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ.

ದೀಪಕ್ ಪೂನಿಯಾ
ದೀಪಕ್ ಪೂನಿಯಾ

ಪುರುಷರ 86 ಕೆಜಿ ವಿಭಾಗದಲ್ಲಿ ದೀಪಕ್ ಪೂನಿಯಾ ಅವರು ಕೇವಲ ಒಂದು ನಿಮಿಷ 23 ಸೆಕೆಂಡುಗಳಲ್ಲಿ ಸಿಯೆರಾ ಲಿಯೋನ್ ನ ಶೆಕು ಕಸ್ಸೆಗ್ಬಾಮಾ ಅವರನ್ನು ಸೋಲಿಸಿ ಸೆಮಿ ಫೈನಲ್ ಗೆ ಬಂದಿದ್ದರು.

ದೀಪಕ್ ಪೂನಿಯಾ
ದೀಪಕ್ ಪೂನಿಯಾ

ಬಳಿಕ ಪುರುಷರ 86 ಕೆಜಿ ವಿಭಾಗದ ಫೈನಲ್ ನಲ್ಲಿ ಪಾಕಿಸ್ತಾನದ ಕುಸ್ತಿಪಟು ಮೊಹಮ್ಮದ್ ಇನಾಮ್ ಅವರನ್ನು ಸೋಲಿಸಿ ಚಿನ್ನವನ್ನು ಗೆದ್ದಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೀಪಕ್ ಪೂನಿಯಾ ಅವರಿಗೆ ಇದು ಮೊದಲ ಚಿನ್ನದ ಪದಕವಾಗಿದೆ.

ದೀಪಕ್ ಪೂನಿಯಾ
ದೀಪಕ್ ಪೂನಿಯಾ

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಒಂಬತ್ತನೇ ಚಿನ್ನದ ಪದಕವಾಗಿದ್ದು ಕುಸ್ತಿಯಲ್ಲಿ ಮೂರನೇ ಪದಕವಾಗಿದೆ.

ಇವರ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡುವ ಮೂಲಕ ಅಭಿನಂದನೆ ತಿಳಿಸಿದ್ದಾರೆ.

ದೀಪಕ್ ಪುನಿಯಾ ಅವರ ಅದ್ಭುತ ಕ್ರೀಡಾ ಪ್ರದರ್ಶನದ ಬಗ್ಗೆ ಹೆಮ್ಮೆಯ ಭಾವನೆ! ಅವರು ಭಾರತದ ಹೆಮ್ಮೆ ಮತ್ತು ಭಾರತಕ್ಕೆ ಅನೇಕ ಪ್ರಶಸ್ತಿಗಳನ್ನು ನೀಡಿದ್ದಾರೆ. ಮುಂಬರುವ ಎಲ್ಲಾ ಪ್ರಯತ್ನಗಳಿಗಾಗಿ ಅವರಿಗೆ ಶುಭಾಶಯಗಳು. ಎಂದು ಟ್ವೀಟ್‌ ಮಾಡಿದ್ದಾರೆ.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಟ್ವೀಟ್‌ ಮಾಡಿದ್ದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ನಮ್ಮ ಯುವ ಕುಸ್ತಿಪಟು ದೀಪಕ್ ಪುನಿಯಾ ಅವರಿಗೆ ಅಭಿನಂದನೆಗಳು. ನಿಮ್ಮ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ವಿಧಾನವು ವೀಕ್ಷಿಸಲು ಆಕರ್ಷಕವಾಗಿತ್ತು. ನೀವು ಭಾರತಕ್ಕೆ ದೊಡ್ಡ ಸಂತೋಷ ಮತ್ತು ವೈಭವವನ್ನು ತಂದಿದ್ದೀರಿ ಎಂದು ಅಭಿನಂದಿಸಿದ್ದಾರೆ. 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ