ಬರ್ಮಿಂಗ್ ಹ್ಯಾಮ್ : ಕಾಮನ್ ವೆಲ್ತ್ ಕ್ರೀಡಾಕೂಟ 2022ರ ಸ್ಪರ್ಧೆಯಲ್ಲಿ ಭಾರತದ ಜೂಡೋ ಪಟು ತುಲಿಕಾ ಮಾನ್ ಅವರು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
78 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸ್ಕಾಟ್ಲೆಂಡಿನ ಅಡ್ಲಿಂಗ್ಟನ್ ಎಂಬುವರ ವಿರುದ್ಧ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಭಾರತಕ್ಕೆ ಜೂಡೋ ಆಟದಲ್ಲಿ ಇದು ಮೂರನೇ ಪದಕವಾಗಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು. ಜೂಡೋ ಆಟದಲ್ಲಿ ಬೆಳ್ಳಿ ಪದಕ ಗೆದ್ದ ತುಲಿಕಾ ಮಾನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಈ ಪದಕ್ಕೂ ಅವರ ವಿಶಿಷ್ಟ ಕ್ರೀಡಾ ವೃತ್ತಿ ಜೀವನದಲ್ಲಿ ಮತ್ತೊಂದು ಗೌರವವಾಗಿದೆ. ಆಕೆಯ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.