Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ವಿನೇಶ್‌ ಫೋಗಟ್ ಅನರ್ಹ ವಿವಾದ: ಸಿಎಎಸ್‌ ನಿಂದ ಅಧಿಕೃತ ಹೇಳಿಕೆ ಬಿಡುಗಡೆ

ನವದೆಹಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದ ಭಾರತದ ಸ್ಟಾರ್‌ ಕುಸ್ತಿಪಟು ವಿನೇಶ್ ಫೋಗಟ್ ಅವರು ತೂಕದ ಏರಿಕೆ ಕಾರಣದಿಂದ ಫೈನಲ್ಸ್ ನಲ್ಲಿ ಭಾಗವಹಿಸದೇ ಟೂರ್ನಿಯಿಂದ ಹೊರಬಿದ್ದಿದ್ದರು. 100 ಗ್ರಾಂ ತೂಕ ಹೆಚ್ಚಾಗಿ ಅವರನ್ನು ಪಂದ್ಯದಿಂದ ಹೊರ ಹಾಕಲಾಗಿತ್ತು. ಈ ಕುರಿತಂತೆ ಫೋಗಟ್‌ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದರು.

ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಬಳಿ ಫೈನಲ್ ಪಂದ್ಯವನ್ನು ತಡಮಾಡಲು ಸಾಧ್ಯವಿಲ್ಲ ಎಂದು ಸಿಎಎಸ್ ಹೇಳಿತ್ತು. ಈ ಸಂದರ್ಭದಲ್ಲಿ ಫೋಗಟ್ ಜಂಟಿ ಬೆಳ್ಳಿಗೆ ಬೇಡಿಕೆ ಇಟ್ಟಿದ್ದರು. ಆದರೆ ಇದೀಗಾ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಪದಕ ನೀಡುವ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ವಿನೇಶ್ ಫೋಗಟ್ ಅವರ ಅನರ್ಹದ ಅರ್ಜಿಯ ಕುರಿತು ಪ್ಯಾರಿಸ್ ಒಲಿಂಪಿಕ್ಸ್‌ ಮುಗಿಯುವುದರ ಒಳಗಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆ ಬಿಡುಗಡೆಗೊಳಿಸಿದೆ.

ಇನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಲಯದಲ್ಲಿ ವಾದಿಸಲು ಭಾರತದ ಉನ್ನತ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದಷ್ಪತ್ ಸಂಘಾನಿಯಾ ಅವರನ್ನು ನೇಮಿಸಿದ್ದು, ವಿನೇಶ್ ಫೋಗಟ್ ಪರ ವಕಾಲತ್ತು ವಹಿಸಲಿದೆ. ಇನ್ನು ವಿನೇಶ್‌ ಫೋಗಟ್‌ ಅವರ ಪರವಾಗಿ ಭಾರತೀಯ ಒಲಿಂಪಿಕ್ ಅಸೋಶಿಯೇಷನ್ ನಿಂತಿದೆ ಎಂದು ಐಒಎ ಹೇಳಿದೆ.

Tags:
error: Content is protected !!