Mysore
21
overcast clouds

Social Media

ಮಂಗಳವಾರ, 03 ಡಿಸೆಂಬರ್ 2024
Light
Dark

ಆಸ್ಟ್ರೇಲಿಯಾಗೆ ಆಘಾತ ನೀಡಿದ ಬುಮ್ರಾ

ಪರ್ತ್‌: ಬಾರ್ಡರ್-‌ಗವಸ್ಕಾರ್‌ ಟ್ರೋಫಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು 46 ರನ್‌ಗಳ ಮುನ್ನಡೆ ಗಳಿಸಿದೆ.

ಟಾಸ್‌ ಗೆದ್ದ ಬುಮ್ರಾ ಬ್ಯಾಟಿಂಗ್‌ ಆಯ್ದುಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು 150 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು, ನಿತೀಶ್‌ ರೆಡ್ಡಿ 41 ರನ್‌ ಗಳಿಸುವ ಮೂಲಕ ಭಾರತ ತಂಡಕ್ಕೆ ಆಸರೆಯಾದರು. ಆಸೀಸ್‌ ಪರ ಜೋಶ್‌ ಹ್ಯಾಜಲ್‌ವುಡ್‌ 4 ವಿಕೆಟ್‌ ಪಡೆದು ಮಿಂಚಿದರು.

ನಂತರ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡ ಬುಮ್ರಾ ದಾಳಿಗೆ ಆರಂಭದಿಂದಲೇ ನಲುಗಿತು. ಮೊದಲ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತಂಡವು 67 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಎರಡನೇ ದಿನದ ಆರಂಭದ ಸೆಸನ್‌ನಲ್ಲೇ ಆಸ್ಟ್ರೇಲಿಯಾ ತಂಡವು 51.2 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ತನ್ನ ಮೊದಲ ಇನ್ನಿಂಗ್ಸ್‌ಗೆ ತೆರೆ ಎಳೆಯಿತು. ಭಾರತದ ಪರ ಬುಮ್ರಾ 5 ವಿಕೆಟ್‌ ಕಬಳಿಸಿದರೆ ಹರ್ಷೀತ್‌ ರಾಣಾ 3 ವಿಕೆಟ್‌, ಸಿರಾಜ್‌ 2 ವಿಕೆಟ್‌ ಕಬಳಿಸಿದರು.

ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡವು ವಿಕೆಟ್‌ ನಷ್ಟವಿಲ್ಲದೇ 87 ರನ್‌ಗಳಿಸಿ ತಮ್ಮ ಆಟವನ್ನು ಮುಂದುವರೆಸಿದ್ದಾರೆ.

Tags: