ಮುಂಬೈ: ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಿಸಿಸಿಐ ನೀಡುವ ಶ್ರೇಷ್ಠ ಅಂತರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ಸ್ಮೃತಿ ಮಂದಾನ ಶ್ರೇಷ್ಠ ಅಂತರಾಷ್ಟ್ರೀಯ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಗರದಲ್ಲಿ ಶನಿವಾರ ನಡೆಯಲಿರುವ ಬಿಸಿಸಿಐ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
31 ವರ್ಷ ವಯಸ್ಸಿನ ಬುಮ್ರಾ ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕಾರ್ ಟ್ರೋಫಿ ಸರಣಿಯಲ್ಲಿ 32 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಈ ಸರಣಿಯಲ್ಲಿ ಸರಣಿ ಶ್ರೇಷ್ಠ ಆಟಗಾರ ಗೌರವಕ್ಕೂ ಪಾತ್ರರಾಗಿದ್ದರು.
ಐಸಿಸಿ ಏಕದಿನ ಆಟಗಾರ್ತಿ ಗೌರವವನ್ನು ಪಡೆದಿರುವ 28 ವರ್ಷ ವಯಸ್ಸಿನ ಮಂದಾನ ಅವರು 2024ರ ವರ್ಷದಲ್ಲಿ ಒಟ್ಟು 743 ರನ್ ಗಳಿಸಿದ್ದಾರೆ. ಅದರಲ್ಲಿ 4 ಭರ್ಜರಿ ಶತಕಗಳು ಸೇರಿವೆ.