ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2022ರ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಯನ್ನು ಪ್ರಕಟಿಸಿದೆ. ಶ್ರೇಷ್ಠ ಕ್ರಿಕೆಟಿಗ ಸರ್ ಗಾರ್ಫೀಲ್ಡ್ ಸೋಬರ್ಸ್ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯು ಈ ಬಾರಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಅವರಿಗೆ ಒಲಿದಿದೆ.
ಇದಕ್ಕೂ ಮುನ್ನ 2022ರ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಬಾಬರ್ ಆಜಂ ಆಯ್ಕೆಯಾಗಿದ್ದರು. ಇದೀಗ ಕಳೆದ ವರ್ಷದ ಅತ್ಯುತ್ತಮ ಆಟಗಾರನ ಪ್ರಶಸ್ತಿ ಕೂಡ ಬಾಬರ್ ಪಾಲಾಗಿದೆ.
ಈ ಬಾರಿಯ ಪ್ರಶಸ್ತಿ ಸುತ್ತಿನಲ್ಲಿ ಒಟ್ಟು ನಾಲ್ವರು ಆಟಗಾರರಿದ್ದರು. ಬಾಬರ್ ಆಜಂ ಜೊತೆ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ಜಿಂಬಾಬ್ವೆ ಆಲ್ರೌಂಡರ್ ಸಿಕಂದರ್ ರಾಝ ಹಾಗೂ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಅಂತಿಮ ಸುತ್ತಿನ ಪೈಪೋಟಿಯಲ್ಲಿದ್ದರು. ಆದರೆ ಮೂರು ಸ್ವರೂಪದ ಕ್ರಿಕೆಟ್ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಬಾಬರ್ಗೆ ಇದೀಗ ಶ್ರೇಷ್ಠ ಕ್ರಿಕೆಟಿಗ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಒಲಿದಿದೆ.