ಪ್ಯಾರಿಸ್: ಇಲ್ಲಿ ನಡೆಯುತ್ತಿರುವ 2024ರ ಪ್ಯಾರಾಲಿಂಪಿಕ್ಸ್‌ನ ಎರಡನೇ ದಿನವಾದ ಇಂದು ಭಾರತಕ್ಕೆ ಒಂದೇ ಆಟದಲ್ಲಿ ಎರಡು ಪದಕ ಬಂದಿದೆ.
10ಮೀ ಏರ್ ರೈಫಲ್ (ಎಸ್‌ಎಚ್-1) ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಹೆಮ್ಮೆಯ ಶೂಟರ್ ಅವನಿ ಲೇಖರಾ ಅವರು ಫೈನಲ್ಸ್‌ನಲ್ಲಿ 249.7 ಅಂಕ ಗಳಿಸುವ ಮೂಲಕ ಅಗ್ರಸ್ಥಾನಕ್ಕೆ ಜಿಗಿದು ಚಿನ್ನಕ್ಕೆ ಮುತ್ತಿಟ್ಟರು.
ಇನ್ನು ದಕ್ಷಿಣ ಕೊರಿಯಾದ ಲೀ ಯೂನಿರ ಅವರು 246.8 ಅಂಕ ಗಳಿಸಿ ಎರಡನೇ ಸ್ಥಾನ ಗಳಿಸಿ ಬೆಳ್ಳಿಗೆ ಕೊರಳೊಡ್ಡಿದರೇ, ಮತ್ತೊಬ್ಬ ಭಾರತೀಯರಾದ ಮೋನಾ ಅಗರ್ವಾಲ್ ಅವರು 228.7 ಪಾಯಿಂಟ್ಸ್ ಗಳೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿಗೆ ತೃಪ್ತಿಪಟ್ಟುಕೊಂಡರು.
ಅವನಿ ಲೇಖರಾ ಅವರು ಟೋಕಿಯೋದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ 10ಮೀ ಏರ್ ರೈಫಲ್‌ನಲ್ಲಿ 249.6 ಅಂಕ ಗಳಿಸಿ ಪದಕ ಗೆದ್ದಿದ್ದರು. ಇದೀಗ ಮತ್ತೊಮ್ಮೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ 249.7 ಅಂಕ ಗಳಿಸಿ ತಮ್ಮದೇ ದಾಖಲೆ ಮುರಿದು ಸತತ ಎರಡನೇ ಬಾರಿಗೆ ಚಿನ್ನಕ್ಕೆ ಮುತ್ತಿಟ್ಟು ದಾಖಲೆ ಬರೆದರು.