ಸಿಡ್ನಿ : ಭಾರತದ ಯುವ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಆಸ್ಟ್ರೇಲಿಯನ್ ಓಪನ್ 2025 ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ನ. 23 ರಂದು ಸಿಡ್ನಿಯ ಸ್ಟೇಟ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಸೂಪರ್ 500 ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ 14ನೇ ಶ್ರೇಯಾಂಕಿತ ಆಟಗಾರ ಜಪಾನ್‌ನ ಯುಶಿ ತನಕಾ ಅವರನ್ನು 21-15, 21-11 ನೇರ ಸೆಟ್‌ಗಳಿಂದ ಸೋಲಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇದನ್ನು ಓದಿ: ತಂದೆಗೆ ಹೃದಯಾಘಾತ : ಇಂದು ನಡೆಯೇಕಿದ್ದ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
ಸೆಮಿಫೈನಲ್ ಪಂದ್ಯದಲ್ಲಿಎರಡನೇ ಶ್ರೇಯಾಂಕದ ತೈವಾನ್ನ ಚೌ ಟಿಯೆನ್ ಚೆನ್ ವಿರುದ್ಧ ಗೆಲ್ಲಲು ಲಕ್ಷ್ಯ ಸೇನ್ ಬರೋಬ್ಬರಿ 86 ನಿಮಿಷಗಳನ್ನು ತೆಗೆದುಕೊಂಡಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಉತ್ತಮ ಲಯ ಪ್ರದರ್ಶಿಸಿದ ಲಕ್ಷ್ಯ , ಯುಶಿ ತನಕಾ ಅವರನ್ನು ಕೇವಲ 38 ನಿಮಿಷಗಳಲ್ಲಿ ಮಣಿಸಿದರು.
ಈ ಗೆಲುವಿನೊಂದಿಗೆ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಗೆದ್ದ ಎರಡನೇ ಭಾರತೀಯ ಪುರುಷ ಆಟಗಾರ ಎಂಬ ಹೆಗ್ಗಳಿಕೆಯನ್ನು ಲಕ್ಷ್ಯ ಸೇನ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ 2017 ರಲ್ಲಿ ಕಿದಂಬಿ ಶ್ರೀಕಾಂತ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದಿದ್ದರು. ಇದೀಗ 24ನೇ ವಯಸ್ಸಿನಲ್ಲೇ ಆಸ್ಟ್ರೇಲಿಯನ್ ಓಪನ್‌ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡುವ ಮೂಲಕ ಲಕ್ಷ್ಯ ಸೇನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.





