Mysore
25
overcast clouds
Light
Dark

ಏಶ್ಯನ್‌ ಗೇಮ್ಸ್:‌ ಕುದುರೆ ಸವಾರಿಯಲ್ಲಿ 41 ವರ್ಷಗಳ ನಂತರ ಚಿನ್ನ ಗೆದ್ದ ಭಾರತ

ಹಾಂಗ್‌ಝೌ: ನವದೆಹಲಿಯಲ್ಲಿ 1982ರಲ್ಲಿ ನಡೆದ ಏಷ್ಯನ್ ಕ್ರೀಡೆಯ ನಂತರ ಚೀನಾದ ಹ್ಯಾಂಗ್‌ ಝೂನಲ್ಲಿ ನಡೆಯುತ್ತಿರುವ ಏಶ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ 41 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ತಂಡ ಕುದುರೆ ಸವಾರಿ (ಡೆಸ್ಸೇಜ್‌ ಟೀಮ್‌ ಇವೆಂಟ್) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ‌

ದಿವ್ಯಕೃತಿ ಸಿಂಗ್, ಹೃದಯ್ ವಿಪುಲ್ ಛಡ್ ಹಾಗೂ ಅನ್ನು ಅಗರ್ವಾಲ್ ಅವರಿದ್ದ ತಂಡ 209.205 ಶೇಕಡಾವಾರು ಅಂಕಗಳೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿತು.

ಇದೇ ತಂಡದಲ್ಲಿ ಸುದೀಪ್ತಿ ಹಜೆವಾಲಾ ಅವರೂ ಇದ್ದರು. ಆದರೆ ಹೆಚ್ಚಿನ ಅಂಕ ಪಡೆದ ಮೊದಲ ಮೂವರ ಹೆಸರನ್ನು ಪರಿಗಣಿಸಲಾಗಿದೆ. 204.882 ಶೇಖಡಾವಾರು ಅಂಕಗಳೊಂದಿಗೆ ಚೀನಾ ಎರಡನೇ ಸ್ಥಾನ ಪಡೆಯಿತು. ಹಾಂಕಾಂಗ್ 204.852 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

1986ರಲ್ಲಿ ನಡೆದ ಇದೇ ಪಂದ್ಯಾವಳಿಯಲ್ಲಿ ಭಾರತ ಕಂಚಿನ ಪದಕ ಪಡೆದುಕೊಂಡಿತ್ತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ