ಹ್ಯಾಂಗ್‌ಝೌ : ಏಷ್ಯನ್ ಕ್ರೀಡಾಕೂಟದ ಪುರುಷರ ಕಬಡ್ಡಿ ವಿಭಾಗದಲ್ಲಿ ಭಾರತ ತಂಡವು ಚಿನ್ನ ಗೆದ್ದಿದೆ.
ವಿವಾದ ಹಾಗೂ ಜಿದ್ದಾಜಿದ್ದಿನಿಂದ ಕೂಡಿದ ಫೈನಲ್ ಪಂದ್ಯದಲ್ಲಿ ಕಳೆದ ಬಾರಿ ಚಾಂಪಿಯನ್ ಇರಾನ್ ವಿರುದ್ಧ 33-29 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿತು.
ಇದರೊಂದಿಗೆ 2018ರ ಜಕರ್ತಾ ಗೇಮ್ಸ್‌ನಲ್ಲಿ ಇರಾನ್ ವಿರುದ್ಧ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಕಬಡ್ಡಿಯಲ್ಲಿ ಪುರುಷ ಹಾಗೂ ಮಹಿಳಾ ತಂಡಗಳು ಚಿನ್ನದ ಸಾಧನೆಗೈದಿದೆ.