Mysore
25
overcast clouds
Light
Dark

ಏಷ್ಯನ್ ಗೇಮ್ಸ್: ಭಾರತಕ್ಕೆ ಡಬಲ್ ಧಮಾಕ; 10,000 ಮೀಟರ್ ಓಟದಲ್ಲಿ ಬೆಳ್ಳಿ ಮತ್ತು ಕಂಚು!

ಹ್ಯಾಂಗ್‌ಝೌ: ಭಾರತದ ಅಥ್ಲೀಟ್‌ಗಳಾದ ಕಾರ್ತಿಕ್ ಕುಮಾರ್ ಮತ್ತು ಗುಲ್ವೀರ್ ಸಿಂಗ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದಿದ್ದಾರೆ. ಶನಿವಾರ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಪುರುಷರ 10000 ಮೀಟರ್ಸ್ ಓಟದಲ್ಲಿ ಓಟಗಾರರಾದ ಕಾರ್ತಿಕ್ ಕುಮಾರ್ ಮತ್ತು ಗುಲ್ವೀರ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.

ಕಾರ್ತಿಕ್ 28:15.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರೆ, ಗುಲ್ವೀರ್ 28:17.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದರು. ಇಬ್ಬರೂ ಭಾರತೀಯರು ಅಂತಿಮ 100 ಮೀಟರ್‌ನಲ್ಲಿ ಪದಕಕ್ಕಾಗಿ ಪೈಪೋಟಿಯಲ್ಲಿದ್ದಾಗ ಆಟಗಾರರು ಪರಸ್ಪರ ಡಿಕ್ಕಿ ಹೊಡೆದು ಬಿದ್ದರು. ಬಹ್ರೇನ್‌ನ ಬಿರ್ಹಾನು ಯಮತಾವ್ ಬಲೆವ್ 28:13.62 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು.

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಭಾರತೀಯ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ. ಕ್ರೀಡಾಪಟುಗಳನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.

ಭಾರತದ ಪದಕ ಬೇಟೆ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಇಲ್ಲಿಯವರೆಗೂ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನ ಪದಕದೊಂದಿಗೆ ಒಟ್ಟಾರೆ 38 ಪದಕಗಳನ್ನು ಗೆದ್ದಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ