ದುಬೈ : ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೂಪರ್-4 ಹಂತಕ್ಕೇರಿರುವ ಭಾರತ ತಂಡಕ್ಕೆ ಆಘಾತ ಕಾಡಿದೆ. ಮೊಣಕಾಲು ಗಾಯಕ್ಕೆ ತುತ್ತಾಗಿರುವ ತಂಡದ ಅಗ್ರ ಆಲ್ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ ಕಪ್‌ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮತ್ತೊಬ್ಬ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಹಾಗೂ ಮೀಸಲು ತಂಡದಲ್ಲಿದ್ದ ಅಕ್ಸರ್ ಪಟೇಲ್ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ. ರವೀಂದ್ರ ಜಡೇಜಾ ಅವರ ಗಾಯ ಎಷ್ಟು ಪ್ರಮಾಣದಲ್ಲಿ ಗಂಭೀರ ಎನ್ನುವುದನ್ನು ಬಿಸಿಸಿಯ ಮಾಹಿತಿ ನೀಡಿಲ್ಲ. ಇದರ ಬೆನ್ನಲ್ಲಿಯೇ ಮುಂಬರುವ ವಿಶ್ವಕಪ್‌ನಲ್ಲಿ ರವೀಂದ್ರ ಜಡೇಜಾ ಪಾಲ್ಗೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.