Mysore
28
scattered clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಸೆ.2 ರಂದು ಭಾರತ-ಪಾಕಿಸ್ತಾನ ಮುಖಾಮುಖಿ

ನವದೆಹಲಿ: ಏಷ್ಯಾಕಪ್‌ 2023ರ ವೇಳಾಪಟ್ಟಿ ಪ್ರಕಟವಾಗಿದೆ. ಆಗಸ್ಟ್ 30 ರಿಂದ ಶುರುವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ.

ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯವು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವುದು ವಿಶೇಷ

ಅಂದರೆ ಈ ಬಾರಿಯ ಏಷ್ಯಾಕಪ್ ಹೈ ಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ ಆಯೋಜಿಸುತ್ತಿರುವ ಈ ಟೂರ್ನಿಯು ಪಾಕ್​ನಲ್ಲಿ ನಡೆಯಬೇಕಿತ್ತು. ಆದರೆ ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ತಂಡವು ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ.

ಅದರಂತೆ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದ್ದು, ಈ ಪಂದ್ಯಗಳಿಗಾಗಿ ಉಳಿದ ತಂಡಗಳು ಲಂಕಾಗೆ ಆಗಮಿಸಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

ಏಷ್ಯಾಕಪ್ ವೇಳಾಪಟ್ಟಿ:

ಆಗಸ್ಟ್ 30- ಪಾಕಿಸ್ತಾನ್ vs ನೇಪಾಳ (ಮುಲ್ತಾನ್)
ಆಗಸ್ಟ್ 31- ಬಾಂಗ್ಲಾದೇಶ್ vs ಶ್ರೀಲಂಕಾ (ಕ್ಯಾಂಡಿ)
ಸೆಪ್ಟೆಂಬರ್ 2- ಭಾರತ vs ಪಾಕಿಸ್ತಾನ್ (ಕ್ಯಾಂಡಿ)
ಸೆಪ್ಟೆಂಬರ್ 3- ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ (ಲಾಹೋರ್)
ಸೆಪ್ಟೆಂಬರ್ 4- ಭಾರತ vs ನೇಪಾಳ (ಕ್ಯಾಂಡಿ)
ಸೆಪ್ಟೆಂಬರ್ 5- ಶ್ರೀಲಂಕಾ vs ಅಫ್ಘಾನಿಸ್ತಾನ್ (ಲಾಹೋರ್)
ಸೂಪರ್-4 ಹಂತದ ವೇಳಾಪಟ್ಟಿ:

ಸೆಪ್ಟೆಂಬರ್ 6- A1 Vs B2 (ಲಾಹೋರ್)
ಸೆಪ್ಟೆಂಬರ್ 9- B1 Vs B2 (ಕೊಲಂಬೊ)
ಸೆಪ್ಟೆಂಬರ್ 10- A1 Vs A2 (ಕೊಲಂಬೊ)
ಸೆಪ್ಟೆಂಬರ್ 12- A2 Vs B1 (ಕೊಲಂಬೊ)
ಸೆಪ್ಟೆಂಬರ್ 14- A1 Vs B1 (ಕೊಲಂಬೊ)
ಸೆಪ್ಟೆಂಬರ್ 15- A2 Vs B2 (ಕೊಲಂಬೊ)
ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)

ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಈ ಹಿಂದಿನ 5 ತಂಡಗಳ ಜೊತೆ ಈ ಬಾರಿ ನೇಪಾಳ ತಂಡವು ಅರ್ಹತೆ ಪಡೆದುಕೊಂಡಿದೆ. ಅದರಂತೆ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ನೇಪಾಳ ತಂಡವು ಗ್ರೂಪ್​-ಬಿ ನಲ್ಲಿದ್ದು, ಏಷ್ಯಾದ ಬಲಿಷ್ಠ ಎರಡು ತಂಡಗಳಾದ ಭಾರತ ಮತ್ತು ಪಾಕಿಸ್ತಾನ್ ವಿರುದ್ಧ ಸೆಣಸಲಿದೆ.

ಏಷ್ಯಾಕಪ್ ಗ್ರೂಪ್​ಗಳು:

ಗ್ರೂಪ್​- A ತಂಡಗಳು:
ಭಾರತ
ಪಾಕಿಸ್ತಾನ್
ನೇಪಾಳ

ಗ್ರೂಪ್​- B ತಂಡಗಳು
ಶ್ರೀಲಂಕಾ
ಅಫ್ಘಾನಿಸ್ತಾನ್
ಬಾಂಗ್ಲಾದೇಶ್

ಏಕದಿನ ಮಾದರಿ ಟೂರ್ನಿ: ಈ ಬಾರಿಯ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ 50 ಓವರ್​ಗಳ ಸ್ವರೂಪದಲ್ಲಿ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ. ಅಂದರೆ ಆಯಾ ಏಷ್ಯಾಕಪ್​ನ ನಂತರ ಐಸಿಸಿ ಟೂರ್ನಿ ಜರುಗುತ್ತಿದ್ದರೆ ಅದೇ ಸ್ವರೂಪದಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತದೆ. ಕಳೆದ ವರ್ಷ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಏಷ್ಯಾಕಪ್ ಅನ್ನು ಕೂಡ ಟಿ20 ಮಾದರಿಯಲ್ಲಿ ಆಯೋಜಿಸಲಾಗಿತ್ತು. ಇದೀಗ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ ಏಷ್ಯಾಕಪ್ ಕೂಡ 50 ಓವರ್​ಗಳಲ್ಲಿ ನಡೆಯಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ