Mysore
22
broken clouds

Social Media

ಶುಕ್ರವಾರ, 11 ಜುಲೈ 2025
Light
Dark

ಏಷ್ಯಾ ಕಪ್ ಕೂಟ ಬಹಿಷ್ಕರಿಸುತ್ತೇವೆ: ಪಾಕ್ ಮಂಡಳಿಯ ಬೆದರಿಕೆ?

ಮುಂಬೈ: ಈ ವರ್ಷದ ಏಷ್ಯಾ ಕಪ್ ಕೂಟವನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವುದನ್ನು ಪಾಕಿಸ್ತಾನ ಕ್ರಿಕೆಟ್ ಅಧಿಕಾರಿಗಳು ವಿರೋಧಿಸಿದ್ದಾರೆ. ತಮ್ಮ ಪ್ರಸ್ತಾವನೆಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಂಗೀಕರಿಸದಿದ್ದರೆ ಪಂದ್ಯಾವಳಿಯನ್ನು ಬಹಿಷ್ಕರಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಜಮ್ ಸೇಥಿ ಅವರು ಮಂಗಳವಾರ ದುಬೈನಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಏಷ್ಯಾ ಕಪ್ ಕೂಟವನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಏಷ್ಯಾ ಕಪ್‌ ಗಾಗಿ ಪಾಕಿಸ್ತಾನದ ಪರಿಷ್ಕೃತ ಹೈಬ್ರಿಡ್ ಮಾದರಿಯ ಪ್ರಸ್ತಾವನೆ ವೇಳಾಪಟ್ಟಿಯನ್ನು ಎಸಿಸಿ ಒಪ್ಪಿಕೊಳ್ಳಬೇಕು. ಒಂದು ವೇಳೆ ಹೆಚ್ಚಿನ ಸದಸ್ಯ ರಾಷ್ಟ್ರಗಳು ಬೇರೆಡೆ ಸ್ಥಳಾಂತರಿಸಲು ಬಯಸಿದರೆ ಕೂಟವನ್ನು 2018 ಮತ್ತು 2022 ರಂತೆ ಯುಎಇಯಲ್ಲಿ ನಡೆಸಬೇಕು ಎಂದು ಸೇಥಿ ಒತ್ತಿ ಹೇಳಿದರು.

ಬಿಸಿಸಿಐನಿ ಹಿಂಬಾಗಿಲಿನ ಬೆಂಬಲದೊಂದಿಗೆ ಶ್ರೀಲಂಕಾ ಮಂಡಳಿಯು ಈ ವರ್ಷ ಏಷ್ಯಾ ಕಪ್ ಅನ್ನು ಆಯೋಜಿಸಲು ಬಯಸಿದೆ ಎಂದು ಎಸಿಸಿಗೆ ತಿಳಿಸಿರುವುದನ್ನು ತಿಳಿದು ಪಿಸಿಬಿ ಆಶ್ಚರ್ಯಚಕಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿಯ ಏಷ್ಯಾ ಕಪ್ ಆತಿಥ್ಯವನ್ನು ಪಾಕಿಸ್ಥಾನ ಪಡೆದುಕೊಂಡಿತ್ತು. ಆದರೆ ರಾಜಕೀಯ ಕಾರಣಗಳಿಂದ ಬಿಸಿಸಿಐ ಭಾರತೀಯ ಆಟಗಾರರನ್ನು ಪಾಕ್ ಗೆ ಕಳುಹಿಸದಿರಲು ನಿರ್ಧರಿಸಿದೆ. ಹೀಗಾಗಿ ಭಾರತದ ಪಂದ್ಯಗಳು ಯುಎಇ ನಲ್ಲಿ ಮತ್ತು ಉಳಿದ ಪಂದ್ಯಗಳು ಪಾಕಿಸ್ಥಾನದಲ್ಲಿ ನಡೆಸುವ ಹೈಬ್ರಿಡ್ ಮಾದರಿಯನ್ನು ಪಾಕ್ ಮಂಡಳಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಗೆ ಪ್ರಸ್ತಾಪಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!