Mysore
23
few clouds

Social Media

ಮಂಗಳವಾರ, 18 ಮಾರ್ಚ್ 2025
Light
Dark

ಮೈಸೂರು ವಾರಿಯರ್ಸ್‌ಗೆ ರೋಚಕ ಜಯ

ಪವನ್ ದೇಶಪಾಂಡೆ ಆಕರ್ಷಕ, ಸಮಯೋಚಿತ ಅರ್ಧ ಶತಕ

ಬೆಂಗಳೂರು: ಪವನ್ ದೇಶಪಾಂಡೆ ಅವರ ಸಮಯೋಚಿತ ಬ್ಯಾಟಿಂಗ್ (57) ಹಾಗೂ ವಿದ್ಯಾಧರ ಪಾಟೀಲ್ ಅವರ ಮಾರಕ ಬೌಲಿಂಗ್ (24ಕ್ಕೆ 4) ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2 ರನ್‌ಗಳ ರೋಚಕ ಜಯ ದಾಖಲಿಸಿದೆ.

146 ರನ್ ಜಯದ ಗುರಿ ಹೊತ್ತ ಹುಬ್ಬಳ್ಳಿ ಟೈಗರ್ಸ್ ಮೈಸೂರು ವಾರಿಯರ್ಸ್ ಬೌಲಿಂಗ್ ದಾಳಿಗೆ ಸಿಲುಕಿ 9 ವಿಕೆಟ್ ಕಳೆದುಕೊಂಡು 143ರನ್ ಗಳಿಸಿ ವೀರೋಚಿತ ಸೋಲನುಭವಿಸಿತು.

ನಾಯಕ ಅಭಿಮನ್ಯು ಮಿಥುನ್ (27), ಶರಣ್ ಗೌಡ (31) ಹಾಗೂ ಆನಂದ್ ದೊಡ್ಡಮನಿ (10) ಉತ್ತಮ ರೀತಿಯಲ್ಲಿ ಹೋರಾಟ ನೀಡಿದರೂ ಸೋಲಿನ ದವಡೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

ಮೈಸೂರು ವಾರಿಯರ್ಸ್ ಪರ ವಿದ್ಯಾಧರ ಪಾಟೀಲ್ ೩, ಶ್ರೇಯಸ್ ಗೋಪಾಲ್ ಹಾಗೂ ಆದಿತ್ಯ ಗೋಯಲ್ ತಲಾ ೨ ವಿಕೆಟ್ ಗಳಿಸಿ ಹುಬ್ಬಳ್ಳಿ ಟೈಗರ್ಸ್ ಪಡೆಯನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಮೈಸೂರಿಗೆ ಆಸರೆಯಾದ ದೇಶಪಾಂಡೆ: ಕುಸಿದ ಮೈಸೂರಿಗೆ ಪವನ್ ದೇಶಪಾಂಡೆ ಮತ್ತೆ ಆಸರೆಯಾದರು. ವಾಸುಕಿ ಕೌಶಿಕ್ ದಾಳಿಗೆ ತತ್ತರಿಸಿದ ಮೈಸೂರು ವಾರಿಯರ್ಸ್ 7ವಿಕೆಟ್ ನಷ್ಟಕ್ಕೆ ಕೇವಲ 145ರನ್ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹುಬ್ಬಳ್ಳಿ ಟೈಗರ್ಸ್ ಅದ್ಭುತ ಯಶಸ್ಸು ಕಂಡಿತು. ನಾಯಕ ಕರುಣ್ ನಾಯರ್ ಹಾಗೂ ನಿತಿನ್ ಬಿಲ್ಲೆ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದು, ಮೈಸೂರಿನ ರನ್ ಗಳಿಕೆಯ ಮೇಲೆ ತೀವ್ರ ಹೊಡೆತ ಬಿದ್ದಿತು. ನಿಹಾಲ್ ಉಳ್ಳಾಲ್ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆಗ ತಂಡಕ್ಕೆ ಆಶ್ರಯ ನೀಡಿದ್ದು, ಪವನ್ ದೇಶಪಾಂಡೆ. 51 ಎಸೆತಗಳನ್ನೆದುರಿಸಿದ ದೇಶಪಾಂಡೆ 8 ಬೌಂಡರಿ ನೆರವಿನಿಂದ 57 ರನ್ ಗಳಿಸಿದರು. ಸತತ ನಾಲ್ಕು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿದ ಕೀರ್ತಿ ಪವನ್ ದೇಶಪಾಂಡೆಗೆ ಸಲ್ಲುತ್ತದೆ. ಒಟ್ಟು 328ರನ್ ಗಳಿಸಿದ ಪವನ್ ದೇಶಪಾಂಡೆ ಈಗ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಶುಭಾಂಗ್ ಹೆಗ್ಡೆ (22) ಮತ್ತು ಶಿವರಾಜ್ (26) ಕೆಲ ಹೊತ್ತು ದೇಶಪಾಂಡೆ ಅವರಿಗೆ ಸಾಥ್ ನೀಡಿದರು. ಕೊನೆಯ ಕ್ಷಣದಲ್ಲಿ ಭರತ್ ಧುರಿ ಕೇವಲ 7 ಎಸೆತಗಳಲ್ಲಿ 2ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಮಿಂಚಿನ ವೇಗದಲ್ಲಿ 18 ರನ್ ಗಳಿಸಿ ತಂಡಕ್ಕೆ ನೆರವಾದರು.

ಸಂಕ್ಷಿಪ್ತ ಸ್ಕೋರ್:

ಮೈಸೂರು ವಾರಿಯರ್ಸ್: 20ಓವರ್‌ಗಳಲ್ಲಿ 8 ವಿಕೆಟ್‌ಗೆ 145 ರನ್ (ಪವನ್ ದೇಶಪಾಂಡೆ 57, ಶುಭಾಂಗ್ ಹೆಗ್ಡೆ 22, ಶಿವರಾಜ್ 26, ವಾಸುಕಿ ಕೌಶಿಕ್ 19ಕ್ಕೆ 3, ರೋಹನ್ ನವೀನ್ 37ಕ್ಕೆ 2)

ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 143(ಸಿಸೋಡಿಯಾ 22, ಶ್ರೀನಿವಾಸ್ ಶರತ್ 21, ಎ.ಮಿಥುನ್ 27, ಶರಣ್ ಗೌಡ್ 31, ಆನಂದ ದೊಡ್ಡ ಮನಿ 10*, ವಿದ್ಯಾಧರ 24ಕ್ಕೆ 4, ಅದಿತ್ಯ ಗೋಯಲ್ 26ಕ್ಕೆ 2, ಶ್ರೇಯಸ್ ಗೋಪಾಲ್ 27ಕ್ಕೆ 2)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ