16ನೇ ಅವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಈ ಮಿಲಿಯನ್ ಡಾಲರ್ ಟೂರ್ನಿಗೆ ಸಿಎಸ್ಕೆ ಆಲ್‌ರೌಂಡರ್ ಡ್ವೇನ್ ಬ್ರಾವೋ ಗುಡ್ ಬೈ ಹೇಳಿದ್ದಾರೆ. ಆದರೆ ಈ ನಡುವೆ ತಂಡದೊಂದಿಗೆ ಸಾಕಷ್ಟು ವರ್ಷ ಕ್ರಿಕೆಟ್ ಆಡಿದ ಬ್ರಾವೋರನ್ನು ಸಿಎಸ್ಕೆ ಫ್ರಾಂಚೈಸಿ ಮತ್ತೆ ತಂಡಕ್ಕೆ ವಾಪಸ್ಸಾತಿ ಮಾಡಿಕೊಂಡಿದೆ. ಆದರೆ ಈ ಬಾರಿ ಬ್ರಾವೋ ಆಟಗಾರನಿಗೆ ಕಾಣಿಸಿಕೊಳ್ಳುವ ಬದಲು ತಂಡದ ಬೌಲಿಂಗ್ ಕೋಚ್ ಆಗಿ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನಂಬರ್ ಒನ್ ಆಗಿರುವ ಬ್ರಾವೋ ಇದೀಗ ಚೆನ್ನೈನಲ್ಲಿ ಬೌಲಿಂಗ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ತಂಡದ ಬೌಲಿಂಗ್ ಆಗಿದ್ದ ಲಕ್ಷ್ಮೀಪತಿ ಬಾಲಾಜಿ ಮುಂದಿನ ಆವೃತ್ತಿಯ ಐಪಿಎಲ್ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿರುವುದರಿಂದ ಅವರ ಸ್ಥಾನಕ್ಕೆ ಬ್ರಾವೋ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಹೇಳಿಕೆ ನೀಡುವ ಮೂಲಕ ಮಾಹಿತಿ ನೀಡಿದೆ. ಈ ಹೇಳಿಕೆಯಲ್ಲಿ, ಬ್ರಾವೋ, “ನಾನು ಈ ಹೊಸ ಪ್ರಯಾಣಕ್ಕಾಗಿ ಉತ್ಸುಕನಾಗಿದ್ದೇನೆ. ನಾನು ಬೌಲರ್‌ಗಳೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಹೀಗಾಗಿ ಈ ಪಾತ್ರದ ಬಗ್ಗೆ ನಾನು ಉತ್ಸುಕನಾಗಿದ್ದೇನೆ. ಆಟಗಾರನಿಂದ ಕೋಚ್‌ನವರೆಗಿನ ಪ್ರಯಾಣದಲ್ಲಿ, ನಾನು ಏನನ್ನೂ ಬದಲಾಯಿಸಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ಆಡುವಾಗಲೂ ಬೌಲರ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೆ. ಒಂದೇ ವ್ಯತ್ಯಾಸವೆಂದರೆ ನಾನು ಇನ್ನು ಮುಂದೆ ಮಿಡ್-ಆನ್ ಅಥವಾ ಮಿಡ್-ಆಫ್‌ನಲ್ಲಿ ನಿಲ್ಲುವುದಿಲ್ಲ ಎಂದಿದ್ದಾರೆ.
Official Statement 🔗🔽 @DJBravo47
— Chennai Super Kings (@ChennaiIPL) December 2, 2022