Light
Dark

ವಿರಾಟ್‌ ಕೊಹ್ಲಿಗೆ ಆಲ್‌ ದಿ ಬೆಸ್ಟ್‌ ಎಂದ ಎಬಿಡಿ…!

ಶುರುವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಎದುರು ಅಫಘಾನಿಸ್ತಾನ ಜಯ ದಾಖಲಿಸಿದೆ. ಇದೀಗ

ದುಬೈ: ಕ್ರಿಕೆಟ್‌ ಅಭಿಮಾನಿಗಳು ಆಸಕ್ತಿಯಿಂದ ಕಾಯುತ್ತಿರುವ ಏಷ್ಯಾ ಕಪ್‌ 2022 ಕ್ರಿಕೆಟ್‌ ಟೂರ್ನಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ.

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂಡೊ-&-ಪಾಕ್‌ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಕಣಕ್ಕಿಳಿದರೆ ಅವರಿಗಿದು 100ನೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಪಂದ್ಯವಾಗಲಿದೆ.

ಕೊಹ್ಲಿ ಹಲವು ತಿಂಗಳ ವಿರಾಮದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮತ್ತೆ ಮರಳಲಿದ್ದು ತಮ್ಮ 100ನೇ ಟಿ20 ಪಂದ್ಯವನ್ನಾಡಲು ಕಾತರರಾಗಿದ್ದಾರೆ. ಆಡಲು ಅವಕಾಶ ದೊರೆತರೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ಪರ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಹಾಗೂ ವಿಶ್ವದ 2ನೇ ಆಟಗಾರ ಎಂಬ ವಿಶೇಷ ದಾಖಲೆ ಕೊಹ್ಲಿ ಪಾಲಾಗಲಿದೆ.

ಈ ನಡುವೆ ಹೈ-ವೋಲ್ಟೇಜ್‌ ಪಂದ್ಯದ ಮೂಲಕ ಕಮ್‌ಬ್ಯಾಕ್‌ ಮಾಡುತ್ತಿರುವ ಕೊಹ್ಲಿ ಅವರಿಗೆ ರಾಯಲ್‌ ಚಾಲೆಂಜರ್ಸ್‌ನಲ್ಲಿ ಅವರ ಸಹ ಆಟಗಾರನಾಗಿದ್ದ ಸ್ನೇಹಿತ, ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿʼವಿಲಿಯರ್ಸ್‌ ವಿಶೇಷ ಸಂದೇಶ ರವಾನಿಸಿದ್ದಾರೆ. ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳಿ ಎಂದು ಎಬಿಡಿ ಹಾರೈಸಿದ್ದಾರೆ. ಇನ್ನೂ ಅನೇಕ ಮಾಜಿ ಆಟಗಾರರು ಕೊಹ್ಲಿ ಅವರಿಗೆ ಶುಭ ಹಾರೈಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ 3 ವರ್ಷಗಳಲ್ಲಿ 33 ವರ್ಷದ ಬಲಗೈ ಬ್ಯಾಟರ್‌ ವಿರಾಟ್‌ ಕೊಹ್ಲಿ ಸಾಲು ಸಾಲು ವೈಫಲ್ಯ ಅನುಭವಿಸಿದ್ದಾರೆ. ತಮ್ಮ 71ನೇ ಅಂತಾರಾಷ್ಟ್ರೀಯ ಶತಕದ ಸಲುವಾಗಿ ಕಿಂಗ್‌ ಕೊಹ್ಲಿ ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ