Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಜೊಕೋವಿಕ್ ಮಡಿಲಿಗೆ 23 ನೇ ಗ್ರ್ಯಾನ್‌ಸ್ಲಾಮ್‌

ಪ್ಯಾರಿಸ್‌: ಟೆನಿಸ್‌ ಲೋಕದ ಸೂಪರ್‌ಸ್ಟಾರ್‌ ನೊವಾಕ್‌ ಜೊಕೋವಿಕ್‌ ಭಾನುವಾರ ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ನೂತನ ಇತಿಹಾಸ ನಿರ್ಮಿಸಿದರು. ಅತ್ಯಧಿಕ 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯೊಂದಿಗೆ ಬಹಳ ಎತ್ತರ ತಲುಪಿದರು. ಈ ಸಾಧನೆಯೊಂದಿಗೆ ಜೊಕೋ ಸಮಕಾಲೀನ ಟೆನಿಸ್‌ನ ಮತ್ತೋರ್ವ ದೈತ್ಯ ರಫೆಲ್‌ ನಡಾಲ್‌ ಅವರನ್ನು ಹಿಂದಿಕ್ಕಿದರು. ನಡಾಲ್‌ 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ಜೊಕೋವಿಕ್‌ ನಾರ್ವೆಯ ಕ್ಯಾಸ್ಪರ್‌ ರೂಡ್‌ ವಿರುದ್ಧ 7-6 (7-1), 6-3, 7-5 ಅಂತರದ ಗೆಲುವು ಸಾಧಿಸಿದರು. ಇದು ಸರ್ಬಿಯನ್‌ ಟೆನಿಸಿಗನಿಗೆ ಒಲಿದ 3ನೇ ಫ್ರೆಂಚ್‌ ಓಪನ್‌ ಪ್ರಶಸ್ತಿ. ಇದು ಅವರ 34ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಹಾಗೂ 7ನೇ ಫ್ರೆಂಚ್‌ ಓಪನ್‌ ಫೈನಲ್‌ ಆಗಿತ್ತು.

ಇನ್ನೊಂದೆಡೆ ಕ್ಯಾಸ್ಪರ್‌ ರೂಡ್‌ ಮೊದಲ ಗ್ರ್ಯಾನ್‌ಸ್ಲಾಮ್‌ ಕನಸು ಕಾಣುತ್ತಿದ್ದರು. ಅವರಿಗೆ ಇದು ಸತತ 2ನೇ ಫ್ರೆಂಚ್‌ ಓಪನ್‌ ಫೈನಲ್‌ ಆಗಿತ್ತು. ಕಳೆದ ವರ್ಷ ರಫೆಲ್‌ ನಡಾಲ್‌ಗೆ ಶರಣಾಗಿದ್ದರು.

ಜೊಕೋವಿಕ್‌ ಪ್ರಶಸ್ತಿ ಚೀಲದಲ್ಲಿ 10 ಆಸ್ಟ್ರೇಲಿಯನ್‌ ಓಪನ್‌, 3 ಫ್ರೆಂಚ್‌ ಓಪನ್‌, 7 ವಿಂಬಲ್ಡನ್‌ ಹಾಗೂ 3 ಯುಎಸ್‌ ಓಪನ್‌ ಟ್ರೋಫಿಗಳು ತುಂಬಿವೆ. 2008ರಲ್ಲಿ ವಿಂಬಲ್ಡನ್‌ ಗೆಲ್ಲುವ ಮೂಲಕ ಜೊಕೋವಿಕ್‌ ಅವರ ಗ್ರ್ಯಾನ್‌ಸ್ಲಾಮ್‌ ಅಭಿಯಾನ ಮೊದಲ್ಗೊಂಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ