Mysore
28
overcast clouds

Social Media

ಮಂಗಳವಾರ, 22 ಸೆಪ್ಟೆಂಬರ್ 2026
Light
Dark

ಭಾರತದಲ್ಲಿನ ಎರಡು ಕಛೇರಿಗಳಿಗೆ ಟ್ವಿಟ್ಟರ್ ಬೀಗ

ಹೊಸದಿಲ್ಲಿ: 2022ರಲ್ಲಿ ಭಾರತದಲ್ಲಿ ದೊಡ್ಡ ಮಟ್ಟದ ಉದ್ಯೋಗ ಕಡಿತಗೊಳಿಸಿದ್ದ ಟ್ವಿಟ್ಟರ್ ಇದೀಗ ತನ್ನ ಕಛೇರಿಗಳನ್ನೂ ಮುಚ್ಚುತ್ತಿರುವ ಮಾಹಿತಿ ಹೊರಬಿದ್ದಿದೆ. ಭಾರತದಲ್ಲಿರುವ ಟ್ವಿಟ್ಟರ್ ಕಂಪನಿಯ ಮೂರು ಕಛೇರಿಗಳ ಪೈಕಿ ಎರಡನ್ನು ಮುಚ್ಚುತ್ತಿದ್ದು ತನ್ನ ಉದ್ಯೋಗಿಗಳನ್ನು ವರ್ಕ್ ಫ್ರಮ್ ಹೋಮ್‌ಗೆ ಕಳುಹಿಸಿದೆ.
ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ದೈತ್ಯ ಸಾಮಾಜಿಕ ಜಾಲತಾಣ ಭಾರೀ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಈ ಹಿಂದೆ ಭಾರತದಲ್ಲೇ ಸುಮಾರು 200ಕ್ಕೂ ಹೆಚ್ಚಿದ್ದ ತನ್ನ ಉದ್ಯೋಗಿಗಳ ಪೈಕಿ ಬರೋಬ್ಬರಿ ಶೇ.90 ರಷ್ಟು ಉದ್ಯೋಗಿಗಳನ್ನು ಕೈಬಿಟ್ಟಿದ್ದ ಟ್ವಿಟ್ಟರ್ ಇದೀಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಕೈ ಹಾಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!