Mysore
25
overcast clouds
Light
Dark

ಅಕ್ಷೇಪರ್ಹ ತಂತ್ರಜ್ಞಾನಗಳಿಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ

ನವದೆಹಲಿ : ಡೀಪ್ ಫೇಕ್ ನಂತಹ ಅಕ್ಷೇಪರ್ಹ ತಂತ್ರಜ್ಞಾನಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಜನರು ಡೀಪ್ ಫೇಕ್ ನಂತಹ ತಂತ್ರಜ್ಞಾನಗಳಿಂದ  ನೋವುಂಡಿದ್ದರೆ ಐಟಿ ನಿಯಮಗಳ ಉಲ್ಲಂಘನೆಗಾಗಿ  ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳ ವಿರುದ್ಧ  ಎಫ್ ಐ ಆರ್ ದಾಖಲಿಸಲು  ಸರ್ಕಾರವು ಜನರಿಗೆ ನೆರವಾಗಲಿದೆ.

ಈ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು  ಐಟಿ  ರಾಜ್ಯ ಸಚಿವ ರಾಜೀವ್  ಚಂದ್ರಶೇಖರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಬಳಕೆದಾರರು ಸೋಶಿಯಲ್ ಮೀಡಿಯಾ  ಪ್ಲಾಟ್ಫಾರ್ಮ್ ಮೂಲಕ  ಐಟಿ ನಿಯಮಗಳ ಉಲ್ಲಂಘನೆ  ಬಗೆಗಿನ ಮಾಹಿತಿ ತಿಳಿಸಲು ಎಲೆಕ್ಟ್ರಾನಿಕ್ಸ್ ಮತ್ತು  ಐಟಿ ನಿಯಮಗಳ ಉಲ್ಲಂಘನೆಗೆ  ಶೂನ್ಯ ಸಹಿಷ್ಣುತೆ  ಇದೆ.

ಮಧ್ಯವರ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಮತ್ತು  ಕಂಟೆಂಟ್ ಎಲ್ಲಿಂದ ಬಂದಿದೆ ಎಂಬ ವಿಷಯವನ್ನು ಬಹಿರಂಗಪಡಿಸಿದರೆ ವಿಷಯವನ್ನು ಪೋಸ್ಟ್ ಮಾಡಿದ ಘಟಕದ ವಿರುದ್ಧ  ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸಂಚಲನ ಮೂಡಿಸಿತ್ತು. ಕೊಡಗಿನ ಬೆಡಗಿಯ ಬಳಿಕ, ಬಿ ಟೌನ್ ನಟಿ ಕಾಜೋಲ್ ಅವರ ಡೀಪ್ ಫೇಕ್ ವಿಡಿಯೋವನ್ನು ವೈರಲ್ ಮಾಡಲಾಗಿತ್ತು.

ಯುವತ್ತಿಯೊಬ್ಬರು ಬಟ್ಟೆ ಬದಲಿಸುತ್ತಿರುವ ವಿಡಿಯೋವೊಂದಕ್ಕೆ ಡೀಪ್ ಫೇಕ್ ತಂತ್ರಜ್ಞಾನದ ಮೂಲಕ   ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿತ್ತು.

ಅಸಲಿಗೆ ಈ ವಿಡಿಯೋವನ್ನು ಜೂನ್ 5 ರಂದು ಟಿಕ್ ಟಾಕ್ ನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಒಬ್ಬರು, ಗೆಟ್ ರೆಡಿ ವಿತ್ ಮಿ ಟ್ರೆಂಡ್ ಅಡಿಯಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋವನ್ನು ಬಳಸಿಕೊಂಡು ವಿಡಿಯೋದಲ್ಲಿರುವ ಯುವತಿಯ ಮುಖಕ್ಕೆ ನಟಿ ಕಾಜೋಲ್ ಅವರ ಮುಖವನ್ನು ಜೋಡಿಸಲಾಗಿದೆ ಎಂದು ಪ್ಯಾಕ್ಟ್ ಚೆಕ್ ಮಾಡುವ ಬೂಮ್ ವರದಿ ಮಾಡಿತ್ತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ