ಮೈಸೂರು : ಜನಪ್ರಿಯ ಆನ್‌ಲೈನ್ ವೀಡಿಯೊ ಕರೆ ಮತ್ತು ಮೀಟಿಂಗ್ ಫ್ಲಾಟ್ ಫಾಂ ಗೂಗಲ್ ಮೀಟ್ ಸರ್ವರ್ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರು ಆನ್‌ಲೈನ್ ಸಭೆಗಳಿಗೆ ಸೇರಲು ಸಾಧ್ಯವಾಗದೆ ತೊಂದರೆ ಅನುಭವಿಸಿದ್ದಾರೆ.
ಲಭ್ಯವಿರುವ ವರದಿಗಳ ಪ್ರಕಾರ, ಭಾರತದಲ್ಲಿ ಸುಮಾರು 65% ಬಳಕೆದಾರರು ಗೂಗಲ್ ಮೀಟ್ ಬಳಸಲು ಅಸಾಧ್ಯವಾಗಿದೆ. ಬಳಕೆದಾರರು ವೆಬ್‌ಸೈಟ್ ಮೂಲಕ ಮೀಟಿಂಗ್‌ಗೆ ಸೇರಲು ಪ್ರಯತ್ನಿಸಿದಾಗ ಹಲವರಿಗೆ “503 Error’ ಎಂಬ ಸಂದೇಶ ಕಾಣಿಸಿಕೊಂಡಿದೆ. ಈ ಸ್ಥಗಿತದಿಂದಾಗಿ ಕೆಲಸಕ್ಕೆ ಸಂಬಂಧಿಸಿದ ತುರ್ತು ಕರೆಗಳು, ಆನ್‌ಲೈನ್ ತರಗತಿಗಳು ಮತ್ತು ವರ್ಚುವಲ್ ಈವೆಂಟ್‌ಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.
ಇದನ್ನು ಓದಿ: ಅಧಿಕಾರ ಹಂಚಿಕೆ ಚರ್ಚೆ : ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ; ಸಚಿವ ಚಲುವರಾಯಸ್ವಾಮಿ
ಮುಖ್ಯ ಸಮಸ್ಯೆಗಳು:
ಸರ್ವರ್ ಸಮಸ್ಯೆ: ಹಲವು ಬಳಕೆದಾರರಿಗೆ ಸಂಪೂರ್ಣವಾಗಿ ಸರ್ವರ್ ಡೌನ್ ಆಗಿ, ಲಾಗಿನ್ ಆಗುವುದೂ ಕಷ್ಟವಾಗಿದೆ.
503 Error: ವೆಬ್‌ಸೈಟ್ ಮೂಲಕ ಮೀಟಿಂಗ್ ತೆರೆಯಲು ಪ್ರಯತ್ನಿಸಿದಾಗ ಈ ನಿರ್ದಿಷ್ಟ ದೋಷ ಕೋಡ್ ಬಂದಿದೆ. ವಿಡಿಯೋ ಗುಣಮಟ್ಟದ ಕುಸಿತ: ಕೆಲವು ಬಳಕೆದಾರರಿಗೆ ವಿಡಿಯೋ ಗುಣಮಟ್ಟದಲ್ಲಿ ತೀವ್ರ ಕುಸಿತ ಉಂಟಾಗಿದೆ.
ಭಾರತದಲ್ಲಿ ಒಂದೇ ದಿನದಲ್ಲಿ 1,700ಕ್ಕೂ ಅಧಿಕ ಜನರು ಈ ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಇದು ಭಾರತದ ಹೊರತಾಗಿ ಕೆಲ ವಿದೇಶಗಳಲ್ಲಿಯೂ ಮೀಟ್ ಸೇವೆಯಲ್ಲಿ ಅಡಚಣೆ ಉಂಟುಮಾಡಿದೆ ಎಂದು ವರದಿಯಾಗಿದೆ.




