ಬೆಂಗಳೂರು : ದೇಶದ ಪ್ರಮುಖ ನಗರಗಳಲ್ಲಿ ಏರ್ಟೆಲ್ ಫೈವ್ ಜಿ ಪ್ಲಸ್ ಆರಂಭವಾಗಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.
ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗಪುರ ಮತ್ತು ವಾರಣಾಸಿ ನಗರಗಳಲ್ಲಿ ಗ್ರಾಹಕರು ಹಂತ ಹಂತವಾಗಿ 5ಜಿ ಪ್ಲಸ್ ಸೇವೆಯನ್ನು ಪಡೆಯಬಹುದು ಎಂದು ಮಾಹಿತಿ ನೀಡಿದೆ ಜೊತೆಗೆ ಗ್ರಾಹಕರು ತಮ್ಮ ಪ್ರಸ್ತುತ ಡೇಟಾ ಪ್ಲಾನ್ ಗಳಲ್ಲಿಯೇ ಅತ್ಯಂತ ವೇಗದ ಸೇವೆಯನ್ನು ಪಡೆಯಬಹುದು ಎಂದು ತಿಳಿಸಿದೆ.