Mysore
32
scattered clouds

Social Media

ಮಂಗಳವಾರ, 12 ಮೇ 2026
Light
Dark

ಎಚ್ ಡಿಕೆ ವಿರುದ್ಧ ಅವಹೇಳನಕಾರಿ ಪೋಸ್ಟರ್ : ಜೆಡಿಎಸ್ ಫುಲ್ ಗರಂ

ಬೆಂಗಳೂರು : ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಪೋಸ್ಟರ್ ವಾರ್ ಜೋರಾಗಿದೆ. ಇದೀಗ ಈ ಕುರಿತು ಜೆಡಿಎಸ್ ಫುಲ್ ಗರಂ ಆಗಿದೆ.

ಬೆಂಗಳೂರಿನಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ, ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟರ್ ಗಳನ್ನು ಅಂಟಿಸಿದ್ದ ಕಿಡಿಗೇಡಿಗಳನ್ನು ಬಂಧಿಸಲು ಪೊಲೀಸರು ಮೀನಾ ಮೇಷ ಎಣಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಈ ರೀತಿಯ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಬೇಕು. ಶೀಘ್ರವೇ ಪೋಸ್ಟರ್ ಅಂಟಿಸಿದ್ದ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸದೆ ಇದ್ದಲ್ಲಿ ವಿಧಾನಸೌಧದಲ್ಲಿರುವ ಗೃಹ ಸಚಿವರ ಕಚೇರಿಯ ಮುಂದೆ ಧರಣಿ ನಡೆಸಲಾಗುವುದು, ಪರಿಸ್ಥಿತಿ ಮಿತಿಮೀರಿದರೆ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ಎಚ್ಚರಿಸಿದ್ದಾರೆ.

ಇತ್ತೀಚಿಗಷ್ಟೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಬೆಂಗಳೂರಿನ ರಾಜಾಜಿನಗರ ರಸ್ತೆ, ಶಿವಾನಂದ ಸರ್ಕಲ್, ಶೇಷಾದ್ರಿಪುರಂ ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಪೆನ್ ಡ್ರೈವ್ ಬ್ರದರ್ ಚಿತ್ರ ಬಿಡುಗಡೆ ಪೋಸ್ಟರ್ ಅಂಟಿಸಲಾಗಿತ್ತು .

ಇನ್ನು ಆ ಪೋಸ್ಟರ್ ನಲ್ಲಿ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ. *ರಾಧಾ* *ಮಾರ*  * ಬ್ಲೂ ಬಾಯ್ಸ್ * ಚಿತ್ರ ಮಂದಿರಗಳಲ್ಲಿ. 68.000 ರೂ. ವೆಚ್ಚದಲ್ಲಿ ಪ್ರಾಮಾಣಿಕ ಕರೆಂಟ್ ಕಳ್ಳರ ನಿರ್ದೇಶನದಲ್ಲಿ ತಯಾರಾಗಿರುವ ಕರೆಂಟ್ ಕಳ್ಳ ಖ್ಯಾತಿಯ ಎಚ್. ಡಿ.ಕೆ ನಿರ್ಮಾಣದ ‘ಪೆನ್ ಡ್ರೈವ್ ಬ್ರದರ್’

ಬರೀ ಟೀಸರ್ ಗೆ ಇಷ್ಟೊಂದು ಟೆನ್ಶನ್ ಆದ್ರೆ ಹೆಂಗೆ ? ಪಿಚ್ಚರ್ ಇನ್ನೂ ಬಾಕಿ ಇದೆ… ಎಂದು ಬರೆಯಲಾಗಿತ್ತು.

ಇದೀಗ ಈ ಪೋಸ್ಟರ್ ಗಳ ಕುರಿತು ಜೆಡಿಎಸ್ ತೀವ್ರವಾಗಿ ಖಂಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದೆ. 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!