Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಸ್ಯಾಮ್‌ಸಂಗ್ ಗ್ಯಾಲಕ್ಸಿ ಮೊಬೈಲ್ ಸುರಕ್ಷತೆ ಇಲ್ಲ: ಕೇಂದ್ರದಿಂದ ಹೈ ಅಲರ್ಟ್‌

ನವದೆಹಲಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರಕಾರ ಹೈ ರಿಸ್ಕ್ ಅಲರ್ಟ್ ಘೋಷಿಸಿದೆ.

ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (CERT-In) ಸ್ಯಾಮ್ ಸಂಗ್ ಗ್ಯಾಲಕ್ಸಿ ಹಳೆಯ ಹಾಗೂ ಹೊಸದಾದ ಮೊಬೈಲ್ ಗಳಲ್ಲಿ ಸುರಕ್ಷತೆ ಇಲ್ಲ. ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ಡಿಸೆಂಬರ್ 13ರಂದು ಸುರಕ್ಷತೆಯ ಅಲರ್ಟ್ ಸುತ್ತೊಲೆಯನ್ನು ಕೇಂದ್ರ ಸರಕಾರ ಹೊರಡಿಸಿದ್ದು, ಸುರಕ್ಷತೆಯ ಮಾನದಂಡಗಳನ್ನು ಅನುಸರಿಸಲಾಗಿಲ್ಲ. ಇದರಿಂದ ಸ್ಯಾಮ್ ಸಂಗ್ ಗ್ರಾಹಕರು ತೊಂದರೆಗೆ ಸಿಲುಕಬಹುದು ಎಂದು ಎಚ್ಚರಿಸಲಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಮೊಬೈಲ್ ಬಳಕೆದಾರರು ಕೂಡಲೇ ತಮ್ಮ ಮೊಬೈಲ್ ಅನ್ನು ಅಪ್ ಡೇಟ್ ಮಾಡಿಕೊಂಡು ಫರ್ಮ್ ವೇರ್ ಮುಂತಾದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

ಇಲ್ಲದಿದ್ದರೆ ನಿಮ್ಮ ಮೊಬೈಲ್ ಹ್ಯಾಕ್ ಆಗುವುದು ಅಥವಾ ನಿಮ್ಮ ಮೊಬೈಲ್ ಡಾಟಾಗಳನ್ನು ಸುಲಭವಾಗಿ ಕದಿಯಬಹುದಾಗಿದೆ ಎಂದು ಎಚ್ಚರಿಕೆಯಲ್ಲಿ ವಿವರಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ