Mysore
33
scattered clouds

Social Media

ಶುಕ್ರವಾರ, 01 ಮೇ 2026
Light
Dark

ಪಾರ್ಲಿಮೆಂಟ್‌ ಭದ್ರತಾ ಲೋಪ: ಆರೋಪಿಗಳ ವಿರುದ್ಧ UAPA  ಅಡಿ ಪ್ರಕರಣ ದಾಖಲು!

ನವದೆಹಲಿ : ಡಿಸೆಂಬರ್‌ ೧೩ (ಅಧಿವೇಶನದ ೮ ನೇ ದಿನ) ರಂದು ಸಂಸತ್‌ ಭದ್ರತೆ ಉಲ್ಲಂಘಿಸಿದ ೬ ಜನರ ಪೈಕಿ ಐವರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಹಳೇ ಸಂಸತ್‌ ಮೇಲೆ ೨೧ ವರ್ಷಗಳ ಹಿಂದೆ ಉಗ್ರರು ದಾಳಿ ನಡೆಸಿದ್ದರು. ಅದೇ ದಿನವಾದ ಬುಧವಾರ ನೂತನ ಸಂಸತ್‌ ಮೇಲೆ ಕಲಾಪದ ವೇಳೆಯಲ್ಲಿ, ಇಬ್ಬರು ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು, ಘೋಷಣೆ ಕೂಗತೊಡಗಿದರು. ಅಲ್ಲದೇ ಹಳದಿ ಬಣ್ಣದ ಸ್ಮೋಕ್‌ ಕ್ಯಾನ್‌ಗಳನ್ನು ಹರಡಿದ್ದರು. ಈ ಇಬ್ಬರನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದರು.

ಲೋಕಸಭೆಯ ಭದ್ರತೆಯನ್ನು ಉಲ್ಲಂಘಿಸಿದವರ ವಿರುದ್ಧ ಯುಎಪಿಎ ( ಲೋಕಸಭಾ ಭದ್ರತಾ ಉಲ್ಲಂಘನೆ) ಅಡಿಯಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇವರೆಲ್ಲರು ಭಗತ್‌ ಸಿಂಗ್‌ ಫ್ಯಾನ್‌ ಕ್ಲಬ್‌ ಎಂಬ ಸಾಮಾಜಿಕ ಜಾಲತಾಣದಲ್ಲಿನ ಪೇಜ್‌ನಲ್ಲಿ ಸಂಬಂಧ ಹೊಂದಿದ್ದರು. ಮೈಸೂರಿನಲ್ಲಿ ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಎಲ್ಲರೂ ಭೇಟಿಯಾಗಿದ್ದರು. ಕಳೆದ ೯ ತಿಂಗಳ ಹಿಂದೆ ಸಂಸತ್‌ ಪ್ರವೇಶಿಸುವ ಬಗ್ಗೆ ಭೆಟಿಯಾಗಿ ಚರ್ಚಿಸಿದ್ದರು. ಡಿಸೆಂಬರ್‌ ೧೦ ರಂದು ಎಲ್ಲರೂ ತಮ್ಮ ತಮ್ಮ ರಾಜ್ಯಗಳಿಂದ ಹೊರಟು ದೆಹಲಿ ತಲುಪಿದರು. ದೆಹಲಿಯ ಗುರುಗ್ರಾಮ್‌ನಲ್ಲಿರುವ ವಿಕ್ಕಿ ಅವರ ಮನೆಯಲ್ಲಿ ಉಳಿದುಕೊಂಡರು. ಇದರಲ್ಲಿ ಅಮೋಲ್‌ ಮಹಾರಾಷ್ಟ್ರದಿಂದ ಸ್ಮೋಕ್‌ ಬಾಂಬ್‌ ತಂದಿದ್ದ ಎನ್ನಲಾಗಿದೆ.

ಈ ಎಲ್ಲಾ ಐವರು ಇಂಡಿಯಾ ಗೇಟ್‌ ಬಳಿ ಭೇಟಿಯಾಗಿದ್ದರು. ಅಲ್ಲಿ ಬಣ್ಣದ ಪಟಾಕಿಗಳನ್ನು ಖರೀದಿಸಿದರು. ನಂತರ ೧೨ ಗಂಟೆಗೆ ಪ್ರವೇಶಿಸಿ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಸ್ಮೋಕ್‌ ಕ್ಯಾನ್‌ ತೆಗೆದರು. ಅಲ್ಲದೇ ಮತ್ತೊಬ್ಬ ಸದನದಲ್ಲಿ ಹಳದಿ ಬಣ್ಣ ಎರಚಿದನು.

೨೦೦೧ರ ಡಿಸೆಂಬರ್‌ ನಲ್ಲಿ ನಡೆದ ಉಗ್ರರ ದಾಳಿಯ ನಡುವೆ ಈ ಭದ್ರತಾ ಲೋಪ ಕಂಡುಬಂದಿದೆ. ಸಂಸತ್‌ ನಲ್ಲಿ ೪ ಲೇಯರ್‌ ಭದ್ರತೆ ಇದ್ದೂ ಸಹಾ ಅದನ್ನು ಬೇಧಿಸಿ ಈ ಘಟನೆ ನಡೆದದ್ದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಇದಲ್ಲದೇ ಜುಲೈನಲ್ಲಿ ನಡೆದ ಸದನಕ್ಕೆ ಭೇಟಿ ನೀಡಲು ಲಕ್ನೋ ದಿಂದ ಸಾಗ್‌ ಶರ್ಮಾ ಅವರು ಬಂದಿದ್ದರು, ಆದರೆ ಒಳಗೆ ಪ್ರವೇಶ ನಿರಾಕರಿಸಿದ ಹಿನ್ನಲೆಯಲ್ಲಿ ಹೊರಗೆ ನಿಂತು ಸದನ ವೀಕ್ಷಿಸಿ ವಾಪಾಸ್ಸಾಗಿದ್ದ ಎನ್ನಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!