Mysore
32
clear sky

Social Media

ಗುರುವಾರ, 13 ಮಾರ್ಚ್ 2025
Light
Dark

ತೇಜಸ್‌ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೋದಿ

ಬೆಂಗಳೂರು: ಭಾರತದ ಹೆಮ್ಮೆಯ ತೆಜಸ್‌ ಫೈಟರ್‌ ಜೆಟ್‌(ಯುದ್ಧ ವಿಮಾನ)ವನ್ನು ಪ್ರಧಾನಿ ನರೇಂದ್ರ ಮೋದಿ ಹಾರಿಸಿ ಸಂತಸ ಪಟ್ಟಿದ್ದಾರೆ.

ನಗರದ ಹೆಚ್‌ಎಎಲ್‌(ಹಿಂದುಸ್ತಾನ್‌ ಎರೋನಾಟಿಕ್ಸ್‌ ಲಿಮಿಟೆಡ್‌) ಆಯೋಜನೆ ಮಾಡಿದ್ದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸಿದ್ದರು.ಈ ವೇಳೆ ತೇಜಸ್‌ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.

ಯುದ್ತಧ ವಿಮಾನದಲ್ಲಿ ಹಾರಾಟದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ʼಇಂದು ತೇಜಸ್‌ನಲ್ಲಿ ಹಾರುತ್ತಿರುವಾಗ, ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ನಾವು ಸ್ವಾವಲಂಭನೆಯ ಕ್ಷೇತ್ರದಲ್ಲಿ, ವಿಶ್ವದಲ್ಲಿ ಯಾರಿಗಿಂತ ನಾವು ಕಡಿಮೆ ಇಲ್ಲ ಎಂದು ನಾನು ಬಹಳ ಹೆಮ್ಮೆಯಿಂದ ಹೇಳುತ್ತೇನೆ. ಭಾರತೀಯ ವಾಯುಪಡೆ, ಡಿಆರ್‌ಡಿಒ, ಹೆಚ್‌ಎಎಲ್‌ ಹಾಗೂ ಎಲ್ಲಾ ಭಾರತೀಯರಿಗೆ ಅಭಿನಂದನೆಗಳುʼ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ