ನವದೆಹಲಿ: ಕರ್ನಾಟಕ ರಾಜ್ಯದ ಹೈಕೋರ್ಟ್‌ನಲ್ಲಿ 158 ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇರ ನೇಮಕಾತಿಯ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಕುರಿತು ಪೂರಕ ಅಧಿಸೂಚನೆ ಹೊರಡಿಸಿರುವ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರುಗಳ ನೇಮಕಾತಿ ಸಮಿತಿ ಮಹಾ ವಿಲೇಖನಾಧಿಕಾರಿ ಹಾಗೂ ಕಾರ್ಯದರ್ಶಿ ಕೆ.ಎಸ್.ಭರತ್ ಕುಮಾರ್ ಅವರು, ಕರ್ನಾಟಕ ಹೈಕೋರ್ಟ್‌ನ 158 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲು 10/02/2025 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ. HCRB/CJR-1/2024 ಮತ್ತು ಅದರ ಮೇಲಿನ ಮುಂದಿನ ಕ್ರಮಗಳನ್ನು ಭಾರತದ ಸುಪ್ರೀಂಕೋರ್ಟ್ ರಿಟ್ ಅರ್ಜಿ(ಸಿವಿಲ್) ಸಂಖ್ಯೆ 1022/1989 ರಲ್ಲಿನ IA ಸಂಖ್ಯೆ 72900/2021, 73015/2021, 40695/2021, 50269/2022, 201893/2022, 93974/2019 (ಅಖಿಲ ಭಾರತ ನ್ಯಾಯಾಧೀಶರ ಸಂಘ ಮತ್ತು ಇತರರು Vs, ಭಾರತ ಸರ್ಕಾರ ಮತ್ತು ಇತರರು) ನಲ್ಲಿ ತೀರ್ಪು ನೀಡುವವರೆಗೆ ತಡೆಹಿಡಿಯಲಾಗಿದೆ ಎಂದು ಈ ಮೂಲಕ ಅಧಿಸೂಚಿಸಲಾಗಿದೆ ಎಂದು ಹೇಳಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಾಲಯವು ಅಗತ್ಯ ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನೇಮಕಕ್ಕೆ ಅಧಿಸೂಚನೆ ಬಿಡುಗಡೆ ಹೊರಡಿಸಿತ್ತು. ಆ ಮೂಲಕ 158 ಸಿವಿಲ್ ಜಡ್ಜ್ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತರಿಂದ ಅರ್ಜಿ ಆಹ್ವಾನಿಸಿ 2025ರ ಫೆಬ್ರವರಿ 10 ರಂದು ಅಧಿಸೂಚನೆ ಹೊರಡಿಸಿ ಮಾರ್ಚ್.12ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ಉಲ್ಲೇಖಿಸಲಾಗಿತ್ತು.