Mysore
25
few clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಶಿವಸೇನೆಗೆ ಸೇರಿದ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ದೇವ್ರ!

ನವದೆಹಲಿ: ರಾಹುಲ್ ಗಾಂಧಿ ಅವರ ಪೂರ್ವ-ಪಶ್ಚಿಮ ಭಾರತ್ ಜೋಡೋ ನ್ಯಾಯ್ ಯಾತ್ರೆ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಮಾಜಿ ಕೇಂದ್ರ ಸಚಿವ ಮಿಲಿಂದ್ ದೇವ್ರ  ಕಾಂಗ್ರೆಸ್ನೊಂದಿಗಿನ ತಮ್ಮ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿ ಮಧ್ಯಾಹ್ನ ಏಕನಾಥ್ ಶಿಂಧೆ ಅವರ ಶಿವಸೇನೆಗೆ ಸೇರಿದ್ದಾರೆ.

ಮಿಲಿಂದ್ ದೇವ್ರ ಮತ್ತು ಇತರ ಹಲವಾರು ಕಾಂಗ್ರೆಸ್ ನಾಯಕರನ್ನು ಶಿಂಧೆ ಮಡಿಲಿಗೆ ಅಧಿಕೃತವಾಗಿ ಸೇರ್ಪಡೆಗೊಳಿಸುವ ಕೆಲವೇ ಗಂಟೆಗಳ ಮೊದಲು, ಏಕನಾಥ್ ಶಿಂಧೆ ಅವರು ಬೆಳವಣಿಗೆಗಳ ಬಗ್ಗೆ ತನಗೆ ತಿಳಿದಿಲ್ಲ ಆದರೆ ಮಿಲಿದ್ ದೇವ್ರ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದು ಹೇಳಿದರು.

ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಯಿಂದ ಅಸಮಾಧಾನಗೊಂಡಿರುವ ಮಿಲಿಂದ್ ದೇವ್ರ ಅವರು ಕಾಂಗ್ರೆಸ್ ತೊರೆಯುವುದಾಗಿ ಭಾನುವಾರ ಘೋಷಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!