Mysore
19
overcast clouds
Light
Dark

Fact Check: ಅಯೋಧ್ಯೆ ಹೆಸರಿನಲ್ಲಿ ಹರಿದಾಡುತ್ತಿರುವ ಫೋಟೊ ಹಿಂದಿನ ಸತ್ಯಾಂಶವೇನು?

ನಿನ್ನೆಯಷ್ಟೇ ( ಜನವರಿ 22 ) ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿದೆ. ಈ ಕಾರ್ಯಕ್ರಮ ಮುಕ್ತಾಯವಾದ ಬೆನ್ನಲ್ಲೇ ಇಂದಿನಿಂದ ಭಕ್ತರಿಗೆ ರಾಮಮಂದಿರ ಪ್ರವೇಶಿಸಲು ಅವಕಾಶ ನೀಡಲಾಗಿದ್ದು, ದೇಶದ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಿದ್ದಾರೆ.

ಇನ್ನು ಇಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಕಾರಣ ಅಯೋಧ್ಯೆಯಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಪೊಲೀಸರು ಭಕ್ತ ವೃಂದವನ್ನು ನಿಭಾಯಿಸುವಲ್ಲಿ ಹರಸಾಹಸಪಟ್ಟಿದ್ದಾರೆ. ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೊವೊಂದು ಹರಿದಾಡಿದ್ದು, ರಸ್ತೆ ತುಂಬಾ ಜನ ಕಿಕ್ಕಿರಿದು ಸೇರಿರುವ ಫೋಟೊ ಇದಾಗಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಹಂಚಿಕೊಂಡಿದ್ದು, ಇಂದು ಅಯೋಧ್ಯೆಯಲ್ಲಿ ರಾಮಮಂದಿರ ವೀಕ್ಷಣೆಗೆ ಬಂದ ಜನಸಾಗರ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಫೋಟೊ ಹಿಂದಿನ ಅಸಲಿಯತ್ತು ಬೇರೆ.

ಕಳೆದ ವರ್ಷ ನಡೆದ ಒಡಿಶಾದ ಪುರಿಯ ಜಗನ್ನಾಥ ರಥಯಾತ್ರೆಯ ಫೋಟೊ ಇದಾಗಿದೆ. ಕಳೆದ ವರ್ಷ ಜೂನ್‌ 21ರಂದು ಈ ಫೋಟೊವನ್ನು ಕ್ಲಿಕ್ಕಿಸಲಾಗಿತ್ತು. ಅಂದು ಈ ಫೋಟೊ ಕುರಿತು ಸಾಕಷ್ಟು ಮಾಧ್ಯಮಗಳು ಸುದ್ದಿಗಳನ್ನೂ ಬರೆದಿವೆ ಹಾಗೂ ವಿಡಿಯೊಗಳನ್ನೂ ಅಪ್‌ಲೋಡ್‌ ಮಾಡಿದ್ದವು. ಈ ಬರಹಗಳ ಹಾಗೂ ವಿಡಿಯೊಗಳ ಸ್ಕ್ರೀನ್‌ಶಾಟ್‌ ಕೂಡ ಲಭ್ಯವಾಗಿದ್ದು, ಹರಿದಾಡುತ್ತಿರುವುದು ಅಯೋಧ್ಯೆ ರಾಮಮಂದಿರದ ಫೋಟೊ ಅಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ. 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ