Mysore
27
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾದ ದತ್ತಾತ್ರೇಯ ಹೊಸಬಾಳೆ!

ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಆಗಿ ಮುಂದಿನ 3 ವರ್ಷಗಳವರೆಗೆ ಕರ್ನಾಟಕದ ಮೂಲದ ದತ್ತಾತ್ರೇಯ ಹೊಸಬಾಳೆ ಮರು ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭಾರತೀಯ ಪ್ರತಿನಿಧಿ ಸಭೆ ಕಳೆದ ಶುಕ್ರವಾರದಿಂದ ಆರಂಭವಾಗಿ ಮೂರು ದಿನಗಳ ಕಾಲ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದಿದೆ.

ಸಭೆಯಲ್ಲಿ ಆರ್‍ಎಸ್‍ಎಸ್‍ನ ಪ್ರಧಾನ ಕಾರ್ಯದರ್ಶಿಯಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಪುನರ್ ಆಯ್ಕೆ ಮಾಡಲಾಗಿದೆ. 2021 ರಿಂದಲೂ ಸರಕಾರ್ಯವಾಹ ಆಗಿ ಕೆಲಸ ಮಾಡುತ್ತಿರುವ ಹೊಸಬಾಳೆ ಅವರನ್ನು ಮತ್ತೊಂದು ಅವಧಿಗೆ (2024 ರಿಂದ 2027 ರವರೆಗೆ ) ಮರು ಆಯ್ಕೆ ಮಾಡಿದ್ದಾರೆ.

Tags:
error: Content is protected !!