ಮುಂಬೈ: ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ನ್ಯಾಯ್ ಯಾತ್ರೆ ಇಂದಿನಿಂದ (ಜನವರಿ 14) ಮಣಿಪುರದಿಂದ ಆರಂಭವಾಗಲಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಶನಿವಾರ ಮಣಿಪುರದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ನ್ಯಾಯ್ ಯಾತ್ರೆಯೂ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವಾಗಿದೆ. ಇದೊಂದು ರಾಜಕೀಯ ರ್ಯಾಲಿಯಾಗಿದ್ದು, ಚುನಾವಣೆಗೆ ಇದು ಸಂಬಂಧ ಪಡುವುದಿಲ್ಲ. ಈ ಯಾತ್ರೆಯಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದರು.
“ಇದು ಸೈದ್ಧಾಂತಿಕ ಯಾತ್ರೆ, ಚುನಾವಣಾ ಯಾತ್ರೆಯಲ್ಲ. ಇದೊಂದು ರಾಜಕೀಯ ರ್ಯಾಲಿಯಾಗಿದ್ದು, ರಾಜಕೀಯ ಉದ್ದೇಶದಿಂದ ರಾಜಕೀಯ ಪಕ್ಷವೊಂದು ನಡೆಸುತ್ತಿದೆ. ಸಂವಿಧಾನ, ಸಂವಿಧಾನದ ಪೀಠಿಕೆ, ತತ್ವಗಳು-ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವವನ್ನು ರಕ್ಷಿಸುವುದು ನಮ್ಮ ರಾಜಕೀಯ ಉದ್ದೇಶವಾಗಿದೆ ಎಂದು ರಮೇಶ್ ಹೇಳಿದ್ದಾರೆ.
ಯಾತ್ರೆಯ ಆರಂಭಿಕ ಹಂತವಾಗಿ ಮಣಿಪುರವನ್ನು ಉದ್ದೇಶಪೂರ್ವಕ ಆಯ್ಕೆಯಾಗಿದೆ ಕಾಂಗ್ರೆಸ್ ವಿವಿಧ ಆಯ್ಕೆಗಳನ್ನು ಪರಿಗಣಿಸಿದೆ ಮತ್ತು ಅಂತಿಮವಾಗಿ, “ಇಲ್ಲಿ ಏನಾಯಿತು ಎಂಬುದರ ಬಗ್ಗೆ ನಮ್ಮ ಕಾಳಜಿಯ ಪ್ರತಿಬಿಂಬವಾಗಿ ಮಣಿಪುರದಿಂದ ಪ್ರಾರಂಭಿಸಲು ನಿರ್ಧರಿಸಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ