Mysore
23
scattered clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ಮಹಿಳಾ ಮೀಸಲಾತಿ ಕಾಯ್ದೆ ಏ.16 ರಿಂದಲೇ ಜಾರಿ

ಕಾನೂನು ಸಚಿವಾಲಯದಿಂದ ಅಧಿಸೂಚನೆ ಪ್ರಕಟ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನ ಒದಗಿಸುವ ಮಹಿಳಾ ಮೀಸಲಾತಿ ಕಾಯ್ದೆ-2023 ಜಾರಿಗೆ ಬಂದಿದೆ. ಈ ಕುರಿತು ಕೇಂದ್ರ ಕಾನೂನು ಸಚಿವಾಲಯ ಗುರುವಾರ (ಏ.16)ವೇ ಅಧಿಸೂಚನೆ ಹೊರಡಿಸಿದೆ.

2029ರಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಈ ಕಾನೂನಿಗೆ ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ 2023ರ ಕಾಯ್ದೆಯನ್ನು ಏಪ್ರಿಲ್ 16ರಿಂದ ಜಾರಿಗೆ ಬರುವಂತೆ ಏಕೆ ಪ್ರಕಟಿಸಲಾಗಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಕಾನೂನು ಜಾರಿಯ ಹಿಂದಿನ ತಾಂತ್ರಿಕತೆಯ ಕುರಿತು ವಿವರಿಸದೆ ಪ್ರತಿಕ್ರಿಯಿಸಿರುವ ಕೇಂದ್ರದ ಅDiಕಾರಿಯೊಬ್ಬರು, ಕಾನೂನು ಜಾರಿಯಾಗದ ಹೊರತು ಕಾಯ್ದೆಗೆ ತಿದ್ದುಪಡಿ ತರಲು ಸಾಧ್ಯವಿಲ್ಲ. ಮುಂದಿನ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆಯ ನಂತರ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬಹುದು ಎಂದರು.

ಗುರುವಾರ ಹೊರಡಿಸಿರುವ ಅಧಿಸೂಚನೆಯಲ್ಲಿ, ಸಂವಿಧಾನ (106ನೇ ತಿದ್ದುಪಡಿ) ಕಾಯ್ದೆ 2023ರ ಸೆಕ್ಷನ್ 1ರ ಉಪ ವಿಭಾಗ (2)ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸುವಾಗ ಈ ಕಾನೂನು ಜಾರಿಗೆ ಬರಲಿದೆ. ಏ.16ರಿಂದ ಈ ಕಾನೂನು ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಲಾಗಿದೆ.

 

Tags:
error: Content is protected !!