Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಶಬರಿ ಮಲೆಯಲ್ಲಿ ಮಹಿಳೆ ಸಾವು ; ನೂಕು ನುಗ್ಗಲಿನಲ್ಲಿ ಉಸಿರುಕಟ್ಟಿ ಕೊನೆಯುಸಿರು

ತಿರುವನಂತಪುರಂ : ಕೇರಳದ ಶಬರಿಮಲೆಯಲ್ಲಿ ಸುಮಾರು ೨ ಲಕ್ಷಕ್ಕೂ ಅಽಕ ಮಂದಿ ಜಮಾಯಿಸಿದ್ದು, ನೂಕು-ನುಗ್ಗಲುನಲ್ಲಿ ಉಸಿರು ಗಟ್ಟಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರಿಂದಾಗಿ ಒತ್ತಡ ಹೆಚ್ಚಾಗಿದ್ದು, ನಿಲ್ಲಲು ಜಾಗವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಪಾದಿಂದ ದೇಗುಲದವರೆಗೂ ಸುಮಾರು ೭೦ ಸಾವಿರ ಜನ ನಿಲ್ಲಲು ಅವಕಾಶವಿದ್ದು, ೨ ಲಕ್ಷಕ್ಕೂ ಅಽಕ ಮಂದಿ ಜಮಾಯಿಸಿದ್ದಾರೆ.

ಭಕ್ತರಿಗೆ ಶೌಚಾಲಯ, ನೀರಿನ ವ್ಯವಸ್ಥೆ ಸಾಲದೆ ಪರದಾಡುವಂತಾಗಿದೆ, ದರ್ಶನಕ್ಕೆ ಸುಮಾರು ೧೪ ಗಂಟೆಗಳಿಗೂ ಹೆಚ್ಚಿನ ಸಮಯ ಹಿಡಿಯುತ್ತಿದ್ದು, ಊಟ, ನೀರು, ಶೌಚಾಲಯದಂತಹ ಮೂಲ ಸೌಲಭ್ಯಗಳಿಗೆ ಪರದಾಡುತ್ತಿದ್ದಾರೆ. ಭಕ್ತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಅವಕಾಶ ಸಿಕ್ಕರೆ ಮಾತ್ರ ಶಬರಿಮಲೆಗೆ ಬರುವಂತೆ ಅಲ್ಲಿನ ಆಡಳಿತ ಮಂಡಳಿ ಮನವಿ ಮಾಡಿದೆ ಎಂದರು.

ಇದನ್ನೂ ಓದಿ :-ಮೈಸೂರು ವಿ.ವಿ | ಹೆಚ್ಚುವರಿ ವಿದ್ಯಾರ್ಥಿಗಳ ತೆರವಿಗೆ ಗಡುವು ನೀಡಿದ ಕುಲಸಚಿವೆ

ಭಕ್ತರಿಗೆ ನೀರಿನ ಸೌಲಭ್ಯ ಕಲ್ಪಿಸಲು ಕಷ್ಟವಾಗುತ್ತಿದೆ. ಯಾತ್ರೆಯನ್ನು ಮಾಲಾಧಾರಿಗಳು ಮುಂದೂಡಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ. ಎರುಮೇಲಿ, ಪಂಪಾ, ರಾಣಿಪಂಪಾ, ಪ್ಲಾಪಳ್ಳಿ, ನೀಲಕ್ಕಲ್ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ. ಹಿಂದೆ-ಮುಂದೆ ಸಂಚರಿಸಲಾಗದೆ ಸಿಲುಕಿ ಪರದಾಡುತ್ತಿದ್ದಾರೆ. ಹಿಂದೆಂದೂ ಇಲ್ಲದಷ್ಟು ಜನರ ದಂಡು ಹರಿದು ಬರುತ್ತಿದೆ. ಪ್ರತಿ ದಿನ ಒಂದು ಲಕ್ಷದಷ್ಟು ಆನ್‌ಲೈನ್ ಬುಕ್ಕಿಂಗ್ ಮತ್ತು ೨೦ ಸಾವಿರ ಸ್ಪಾಟ್ ಬುಕ್ಕಿಂಗ್‌ಗೆ ಸೀಮಿತಗೊಳಿಸಿಲಾಗಿತ್ತು. ಆದರೆ ಅದನ್ನು ಮೀರಿ ಜನ ಟಿಕೆಟ್ ಪಡೆದು ದರ್ಶನಕ್ಕೆ ಮುಂದಾಗಿದ್ದಾರೆ.

ಮೆದುಳು ತಿನ್ನುವ ಮಾರಣಾಂತಿಕ ನೆಗ್ಲೇರಿಯಾ ಪೌಲೇರಿ ಅಮೀಬಾ ಸೋಂಕಿನ ನಡುವೆಯೂ ಯಾತ್ರಿಕರ ಭೇಟಿ ತಗ್ಗಿಲ್ಲ. ಜನವರಿಯಲ್ಲಿ ಮಕರ ಸಂಕ್ರಾಂತಿ ವೇಳೆ ಮಂಡಲ ಪೂಜೆಗಾಗಿ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಅದಕ್ಕಾಗಿ ನವೆಂಬರ್, ಡಿಸೆಂಬರ್‌ನಲ್ಲೇ ಯಾತ್ರೆ ಪೂರ್ಣಗೊಳಿಸಿಕೊಳ್ಳುವ ಉದ್ದೇಶದಿಂದ ಬಹಳಷ್ಟು ಮಂದಿ ತೆರಳುತ್ತಿದ್ದಾರೆ.

Tags:
error: Content is protected !!