ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ಭಾರತ ಸರ್ಕಾರ ತಕ್ಕ ಶಾಸ್ತಿ ಮಾಡಿದ್ದು, ಏಪ್ರಿಲ್.27ರೊಳಗೆ ಭಾರತ ಬಿಟ್ಟು ತೊಲಗಿ ಎಂದು ಪಾಕ್ ಪ್ರಜೆಗಳಿಗೆ ವಾರ್ನಿಂಗ್ ಮಾಡಿದೆ.
ಈ ಮೂಲಕ ಪಾಕ್ ಪ್ರಜೆಗಳ ಎಲ್ಲಾ ರೀತಿಯ ವೀಸಾಗಳನ್ನು ಸರ್ಕಾರ ಸ್ಥಗಿತಗೊಳಿಸಿದ್ದು, ಮೆಡಿಕಲ್ ವೀಸಾಗಳಿಗೆ ಏಪ್ರಿಲ್.29ರವರೆಗೆ ಅವಕಾಶ ನೀಡಿದೆ.
ಇದರ ಜೊತೆಗೆ ಪಾಕಿಸ್ತಾನದಲ್ಲಿರುವ ಎಲ್ಲಾ ಭಾರತೀಯರನ್ನು ಆದಷ್ಟು ಬೇಗ ವಾಪಸ್ ಭಾರತಕ್ಕೆ ಮರಳುವಂತೆ ಸೂಚನೆ ನೀಡಿದೆ.
ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ವೀಸಾ ಅವಧಿ ಮುಗಿಯುವ ಮೊದಲು ಭಾರತವನ್ನು ತೊರೆಯಬೇಕು ಎಂದು ಖಡಕ್ ಸೂಚನೆ ನೀಡಿದೆ.





