ಹೊಸದಿಲ್ಲಿ : ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಮಾಡಿರುವ ಆರೋಪಗಳನ್ನು ಚುನಾವಣಾ ಆಯೋಗವು ತಳ್ಳಿಹಾಕಿದೆ.
ಮತ ಕಳ್ಳತನ ಮಾಡುವವರಿಗೆ ಮುಖ್ಯ ಚುನಾವನಾ ಆಯುಕ್ತ (ಸಿಇಸಿ) ಜ್ಞಾನೆಶ್‌ಕುಮಾರ್ ರಕ್ಷಣೆ ನೀಡುತ್ತಿದ್ದಾರೆ ಎಂಬ ರಾಹುಲ್ ಆರೋಪವು ಆಧಾರರಹಿತವಾಗಿದ್ದು, ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದೆ.
‘ರಾಹುಲ್ ಆರೋಪವು ನಿರಾಧಾರವಾಗಿದ್ದು, ಅವರು ಅಂದುಕೊಂಡಂತೆ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಯಾವುದೇ ಮತಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಮತದಾರರಿಗೆ ಮಾಹಿತಿ ನೀಡದೆ ಪಟ್ಟಿಯಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.





